ಮಂಗಳೂರು: ಕಾಲೇಜಿಗೆ ಹೋದ ಯುವತಿ ಏಕಾಏಕಿ ನಾಪತ್ತೆಯಾದ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾಪತ್ತೆಯಾದ ಯುವತಿಯನ್ನು ಸ್ವಾತಿ (23) ಎನ್ನಲಾಗಿದೆ.
ಸ್ವಾತಿ ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಕೊಡ್ಲಮೊಗರು ಗ್ರಾಮದ ಊರ್ನಿ ಎಂಬಲ್ಲಿ ತನ್ನ ಕುಟುಂಬಸ್ಥರೊಂದಿಗೆ ವಾಸವಾಗಿದ್ದು, ದೇರಳಕಟ್ಟೆ ಮಾಡೂರಿನ ಖಾಸಗಿ ಕಾಲೇಜ್‌ನಲ್ಲಿ ಅಂತಿಮ ವರ್ಷದ ಎಂಬಿಎ ವ್ಯಾಸಂಗ ಮಾಡುತಿದ್ದಳು.
ಪ್ರತಿನಿತ್ಯ ಮನೆಯಿಂದ ಕಾಲೇಜಿಗೆ ಹೋಗುತ್ತಿದ್ದ ಸ್ವಾತಿ ಮಾ. 14 ರಂದು ಎಂದಿನಂತೆ ಬೆಳಗ್ಗೆ ತನ್ನ ದ್ವಿ ಚಕ್ರ ವಾಹನದಲ್ಲಿ ಮುಡಿಪುಗೆ ಹೋಗಿ ಅಲ್ಲಿಂದ ಬಸ್ಸಿನಲ್ಲಿ ಹೋಗಿದ್ದಾಳೆ. ಆದರೆ ಸಂಜೆ ಆಕೆಯ ಅಣ್ಣ ಕರೆ ಮಾಡಿದಾಗ ಸ್ವಾತಿಯ ಮೊಬೈಲ್ ಫೋನ್ ಸ್ವಿಚ್ ಆಪ್ ಆಗಿದೆ ಮತ್ತು ಹಲವಾರು ಕಡೆ ಹುಡುಕಿದರೂ ಸ್ವಾತಿಯ ಸುಳಿವು ಸಿಕ್ಕರುವುದಿಲ್ಲ ಎಂದು ಆಕೆಯ ಅಣ್ಣ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.