ವಿಷಕಾರಿ ನಗರ ಹಾವುಗಳೊಂದಿಗೆ ಯುವಕ ಸ್ಟಂಟ್ ಮಾಡಲು ಯತ್ನಿಸಿ ಆಸ್ಪತ್ರೆ ದಾಖಲಾಗಿರುವ ಘಟನೆ ಶಿರಸಿಯಲ್ಲಿ ನಡೆದಿದ್ದು, ಯುವಕನನ್ನು ಶಿರಸಿಯ ಮಾಜ್ ಸೈಯದ್ ಎಂದು ಗುರುತಿಸಲಾಗಿದೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಅಂದಹಾಗೇ, ವಿಡಿಯೋದಲ್ಲಿ ಸೈಯದ್ ಮೂರು ವಿಷಕಾರಿ ನಾಗರಹಾವುಗಳೊಂದಿಗೆ ಸ್ಟಂಟ್ ಮಾಡಲು ಮುಂದಾಗಿದ್ದು ಕಾರಣಬಹುದಾಗಿದೆ. ಹಾವಿನ ಬಾಲವನ್ನ ಹಿಡಿದು ಎಳೆಯುತ್ತಾ.. ಎಡೆ ಎತ್ತಿ ನಿಂತಿದ್ದ ಹಾವುಗಳ ಗಮನ ಸೆಳೆಯಲು ಮುಂದಾಗುತ್ತಿರುತ್ತಾನೆ. ಈ ವೇಳೆ ಕ್ಷಣ ಮಾತ್ರದಲ್ಲಿ ಯುವಕನ ಎಡಭಾಗದಲ್ಲಿದ್ದ ಹಾವು ದಾಳಿ ಮಾಡಿ ಆತನ ಮೊಣಕಾಲಿಗೆ ಕಚ್ಚುತ್ತದೆ. ಇದರಿಂದ ಗಾಬರಿಗೊಂಡಂತೆ ಕಂಡ ಆತ ಎದ್ದು ಹಾವಿನನಿಂದ ಬಿಡಿಸಿಕೊಳ್ಳಲು ಮುಂದಾಗುವುದರೊಂದಿಗೆ ವಿಡಿಯೋ ಕೊನೆಗೊಳುತ್ತದೆ.
ಈ ವಿಡಿಯೋವನ್ನು ಭಾರತೀಯ ಅರಣ್ಯ ಇಲಾಖೆ ಅಧಿಕಾರಿ ಸುಸಂತ ನಂದಾ ಅವರು ಶೇರ್ ಮಾಡಿದ್ದಾರೆ. ಇದು ನಾಗರ ಹಾವುಗಳನ್ನು ನಿಭಾಯಿಸುವ ಭಯಾನಕ ವಿಧಾನವಾಗಿದೆ. ಹಾವು ತನ್ನ ಮುಂದಿರೋ ಮನುಷ್ಯ ಅಥವಾ ಪ್ರಾಣಿಯ ಚಲನೆಯನ್ನು ಬೆದರಿಕೆ ಎಂದು ಪರಿಗಣಿಸುತ್ತದೆ. ಕೆಲವೊಮ್ಮೆ ಇದು ಜೀವಕ್ಕೆ ಮಾರಕವಾಗಬಹುದು ಎಂದು ಬರೆದುಕೊಂಡಿದ್ದಾರೆ.
ಇನ್ನೂ, ಯುವಕನ ಆರೋಗ್ಯದ ಬಗ್ಗೆ ಮಾಹಿತಿ ನೀಡಿರೋ ಸ್ನೇಕ್‌ಬೈಟ್ ಹೀಲಿಂಗ್ ಅಂಡ್ ಎಜುಕೇಶನ್ ಸೊಸೈಟಿಯ ಸಂಸ್ಥಾಪಕಿ ಪ್ರಿಯಾಂಕಾ ಕದಂ, ಸೈಯದ್ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾನೆ ಎಂದು ತಿಳಿಸಿದ್ದಾರೆ. ಅಲ್ಲದೇ ಆತನಿಗೆ 46 ವೇಲ್ಸ್ ಆ್ಯಂಟಿ ವೇನಮ್ ಡೋಸ್ ನೀಡಲಾಗಿದೆ. ಆತನ ಆರೋಗ್ಯ ಇನ್ನು ಚೇತರಿಕೊಳ್ಳಬೇಕಿದೆ. ಅವರು ಸಂಪೂರ್ಣವಾಗಿ ಚೇತರಿಸಿಕೊಂಡ ನಂತರ ಅವರೊಂದಿಗೆ ಮಾತನಾಡುತ್ತೇನೆ. ಆತನಿಗೆ ಪರಿಣಿತರು ಮಾರ್ಗದರ್ಶನ ನೀಡಲು ಪ್ರಯತ್ನಿಸಬಹುದು ಎಂದಿದ್ದಾರೆ.
This is just horrific way of handling cobras…
— Susanta Nanda IFS (@susantananda3) March 16, 2022
The snake considers the movements as threats and follow the movement. At times, the response can be fatal pic.twitter.com/U89EkzJrFc