ವಿಟ್ಲ: ಅನ್ನಮೂಲೆ ಶ್ರೀ ಅನ್ನಪೂರ್ಣೇಶ್ವರಿ ದೇವಿ ಮಂದಿರದ 41ನೇ ವಾರ್ಷಿಕೋತ್ಸವ ಹಾಗೂ ಪರಿವಾರ ದೈವಗಳ ನೇಮೋತ್ಸವ ಮಾ.19 ರಂದು ನಡೆಯಲಿದೆ.
ವೇ.ಮೂ. ಉದಯೇಶ ಕೆದಿಲಾಯ ರವರ ನೇತೃತ್ವದಲ್ಲಿ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಕಾರ್ಯಕ್ರಮ ನಡೆಯಲಿದೆ.
ಮಾ.19 ರಂದು ಬೆಳಿಗ್ಗೆ ಗಣಪತಿ ಹೋಮ, ನವಕಲಶಾಭಿಷೇಕ ತಂಬಿಲ, ನಾಗ ತಂಬಿಲ- ಪರಿವಾರ ದೈವಗಳಿಗೆ ತಂಬಿಲ, ಮಧ್ಯಾಹ್ನ ಮಹಾಪೂಜೆ, ದರ್ಶನ ಬಲಿ, ಪ್ರಸಾದ ವಿತರಣೆ, ಮಹಾ ಅನ್ನಸಂತರ್ಪಣೆ, ಭಜನಾ ಕಾರ್ಯಕ್ರಮ, ರಾತ್ರಿ ಶ್ರೀ ಅನ್ನಪೂರ್ಣೇಶ್ವರಿ ದೇವಿಯ ಪೂಜೆ, ದರ್ಶನ ಬಲಿ ಬಳಿಕ ಅಣ್ಣಪ್ಪ ಸ್ವಾಮಿ, ಮಂತ್ರ ಗುಳಿಗ, ಕೊರಗಜ್ಜ ದೈವಗಳಿಗೆ ನೇಮೋತ್ಸವ ನಡೆಯಲಿದೆ.