ಪುತ್ತೂರು: ‘ಶ್ರೀ ಎಂಟರ್ಪ್ರೈಸಸ್’ ಸ್ಥಳಾಂತರಗೊಂಡು ಏಳ್ಮುಡಿಯ ಪ್ರಾವಿಡೆನ್ಸ್ ಪ್ಲಾಜಾದ ಎರಡನೇ ಮಹಡಿಯಲ್ಲಿ ಶುಭಾರಂಭಗೊಂಡಿತು.
ನೂತನ ಮಳಿಗೆಯನ್ನು ಡಾ. ಮಂಜುನಾಥ್ ಶೆಟ್ಟಿ ರವರು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟನೆಗೊಳಿಸಿದರು.
ಈ ಸಂದರ್ಭದಲ್ಲಿ ಡಾ. ಸುರೇಶ್ ಪುತ್ತುರಾಯ, ಕೃಷ್ಣ ಪ್ರಸಾದ್ ಭಂಡಾರಿ, ಜಯಕುಮಾರ್ ನಾಯರ್, ಮಾಲಕರಾದಂತಹ ಶಿವರಾಮ್ ಆಳ್ವ ಹಾಗೂ ಅವರ ತಾಯಿ ಅನುಸೂಯ ಡಿ ಆಳ್ವ , ಪತ್ನಿ ಸೀಮಾ ಎಸ್ ಆಳ್ವ, ಮಕ್ಕಳಾದ ಅಮೋಘ್ ಆಳ್ವ , ವರ್ಷಿಣಿ ಆಳ್ವ ಮತ್ತು ಕುಟುಂಬಸ್ಥರು, ಸ್ನೇಹಿತರು ಉಪಸ್ಥಿತರಿದ್ದರು.