ಬಂಟ್ವಾಳ: ಬೈಪಾಸ್ ರಸ್ತೆಯಲ್ಲಿ ಮಾರುತಿ ಅಲ್ಟೋ ಕಾರು ಸುಮಾರು ಹತ್ತು ಅಡಿ ಆಳವಾದ ಕಂದಕಕ್ಕೆ ಬಿದ್ದ ಘಟನೆ ಇಂದು ಮಧ್ಯಾಹ್ನ ವೇಳೆ ನಡೆದಿದೆ.
ಅಲ್ಲಿಪಾದೆಯ ಗಿರೀಶ್ ಎಂಬವರಿಗೆ ಸೇರಿದ ಕಾರು, ಅಲ್ಲಿಪಾದೆಯಿಂದ ಬಿಸಿರೋಡ್ ಬರುತ್ತಿರುವ ವೇಳೆ ಬಂಟ್ವಾಳದ ಬೈಪಾಸ್ ಕೆಂಪುಗುಡ್ಡೆ ಕ್ರಾಸ್ ನ ಎದುರುಗಡೆ ರಸ್ತೆಯ ಬದಿಯಲ್ಲಿ ಇದ್ದ ವಿದ್ಯುತ್ ತಂತಿ ಕಂಬಕ್ಕೆ ಡಿಕ್ಕಿ ಹೊಡೆದು, ಬಳಿಕ ಆಳೆತ್ತರದ ಗುಂಡಿಗೆ ಪಲ್ಟಿಯಾಗಿ ಬಿದ್ದಿದೆ.
ಅಪಘಾತದಲ್ಲಿ ಐದು ವರ್ಷದ ಬಾಲಕ ಗಾಯಗೊಂಡಿದ್ದು, ಸುವಿದ್ ಎಂಬ ಬಾಲಕನಿಗೂ ಗಾಯವಾಗಿದ್ದು, ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರಿನಲ್ಲಿ ಇಬ್ಬರು ಮಕ್ಕಳು ಸಹಿತ ಒಟ್ಟು ನಾಲ್ಕು ಮಂದಿ ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ.






























