ಕೊಣಾಜೆ: ಪೊಲೀಸ್ ಠಾಣಾ ವ್ಶಾಪ್ತಿಯ ಅಸೈಗೋಳಿಯಲ್ಲಿ ಅಳವಡಿಸಿದ ಅಂಬೇಡ್ಕರ್ ಜಯಂತಿ ಫ್ಲೆಕ್ಸ್ ಹಾನಿಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಅಸೈಗೋಳಿ ನಿವಾಸಿ ದಾಮೋದರ ಎಂಬವರ ಪುತ್ರ ಶರಣ್( 24) ಮತ್ತು ಹರೇಕಳ ನಿವಾಸಿ ಗೋಪಾಲಕೃಷ್ಣ ಎಂಬವರ ಪುತ್ರ ಸುಜಿತ್(26) ಎಂಬವರನ್ನು ಕೊಣಾಜೆ ಪೊಲೀಸರು ಬಂಧಿಸಿದ್ದಾರೆ.
ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಆರೋಪಿಗಳು ಈ ಕೃತ್ಯವನ್ನು ಎಸಗಿದ್ದಾರೆ ಎಂದು ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿದೆ.
ದಕ್ಷಿಣ ಕನ್ನಡ ಜಿಲ್ಲಾ ದಲಿತ ಸೇವಾ ಸಮಿತಿಯ ಬ್ಯಾನರ್ ಹರಿದು ಹಾಕಿದ್ದರು. ಇದೇ ಆರೋಪಿಗಳು ಅಸೈಗೋಳಿ ಪರಿಸರದಾದ್ಯಂತ ಅಳವಡಿಸಿರುವ ಹಲವು ಬ್ಯಾನರ್‌ಗಳನ್ನು ಹರಿದು ಹಾಕಿದ್ದರು. ಇದರಿಂದ ಕಾರ್ಯಕ್ರಮದ ಸಂಘಟಕರ ಆಕ್ರೋಶಕ್ಕೆ ಕಾರಣವಾಗಿತ್ತು. ಆರೋಪಿಗಳ ವಿರುದ್ಧ ತನಿಖೆ ಮುಂದುವರಿದಿದೆ.