ಪುತ್ತೂರು: ಪ್ರತಿಷ್ಠಿತ ಜ್ಯುವೆಲ್ಲರಿ ಮಳಿಗೆ ಜಿಎಲ್ ಆಚಾರ್ಯ ಜ್ಯುವೆಲ್ಲರ್ಸ್ ವತಿಯಿಂದ ಮಾಣಿ-ಮೈಸೂರು ಹೆದ್ದಾರಿಯ ಪಕ್ಕದಲ್ಲಿರುವ ಸಂಟ್ಯಾರ್ ಜಂಕ್ಷನ್ ನಲ್ಲಿ ಸುಸಜ್ಜಿತ ಆಟೋ ರಿಕ್ಷಾ ನಿಲ್ದಾಣ ನಿರ್ಮಾಣಗೊಂಡಿದ್ದು, ಮಾ.26 ರಂದು ನಿಲ್ದಾಣವನ್ನು ಪುತ್ತೂರು ಶಾಸಕ ಸಂಜೀವ ಮಠಂದೂರು ಹಾಗೂ ಜಿ.ಎಲ್ ಆಚಾರ್ಯ ಜ್ಯುವೆಲ್ಲರ್ಸ್ ಸಂಸ್ಥೆಯ ಮಾಲಕ ಬಲರಾಮ ಆಚಾರ್ಯ ಲೋಕಾರ್ಪಣೆಗೊಳಿಸಿದರು.
ಸಂಜೀವ ಮಠಂದೂರು ಮಾತನಾಡಿ, ಜಿ.ಎಲ್ ಆಚಾರ್ಯ ಸಂಸ್ಥೆ ಹಲವರು ಸಮಾಜಮುಖಿ ಕಾರ್ಯ ನಡೆಸುತ್ತಿದೆ. ರಿಕ್ಷಾ ಚಾಲಕರಿಗೆ ಆಶ್ರಯ ಕಲ್ಪಿಸುವ ಮೂಲಕ ಬಹುದೊಡ್ಡ ಸೇವೆ ಮಾಡಿದೆ ಎಂದರು. ಪ್ರಧಾನಿ ಮೋದಿಯವರ ಆಶಯದಂತೆ ಸ್ವಚ್ಛತೆಗೆ ಹೆಚ್ಚು ಪ್ರಾಮುಖ್ಯತೆ ನೀಡಬೇಕು ಎಂದರು. ಈ ರಿಕ್ಷಾ ತಾಣವನ್ನು ಸ್ವಚ್ಛವಾಗಿ ಇಟ್ಟುಕೊಂಡಲ್ಲಿ ಇನ್ನಷ್ಟು ಜಿ ಎಲ್ ಆಚಾರ್ಯ ಸಂಸ್ಥೆಯಿಂದ ಸಹಾಯ ನೀಡಬಹುದು ಎಂದರು.
ಜಿ.ಎಲ್ ಆಚಾರ್ಯ ಸಂಸ್ಥೆಯ ಮಾಲಕ ಬಲರಾಮ ಆಚಾರ್ಯ ಮಾತನಾಡಿ, ಪುತ್ತೂರು ಬಹಳ ವೇಗವಾಗಿ ಬೆಳೆಯುತ್ತಿರುವ ನಗರ ಅದರ ಒಟ್ಟಿಗೆ ಸುತ್ತಮುತ್ತಲಿನ ಸ್ಯಾಟಲೈಟ್ ಸೆಂಟರ್ ಗಳು ಬೆಳೆಯಬೇಕು ಇಲ್ಲದಿದ್ದರೆ ಅವ್ಯವಸ್ಥೆ ಆಗ್ತದೆ ಎಂದರು.
ಈ ಸಂದರ್ಭದಲ್ಲಿ ಸಂಪ್ಯ ಠಾಣಾಧಿಕಾರಿ ಉದಯರವಿ, ರಾಧಾಕೃಷ್ಣ ರೈ ಬೂಡಿಯಾರ್, ಗ್ರಾ.ಪಂ ಸದಸ್ಯ ಹರೀಶ್ ನಾಯ್ಕ್, ಪವಿತ್ರ ರೈ, ಗಣೇಶ್ ರೈ ಮೂಲೆ, ಜಯಂತ್ ರೈ, ಶರತ್ ರೈ ಹಾಗೂ ರಿಕ್ಷಾ ಚಾಲಕ ಮಾಲಕರು ಉಪಸ್ಥಿತರಿದ್ದರು. ಹರೀಶ್ ಬಿಜಾತ್ರೆ ಕಾರ್ಯಕ್ರಮ ಸ್ವಾಗತಿಸಿ ಧನ್ಯವಾದಗೈದರು.
























