ಚಿಕ್ಕಬಳ್ಳಾಪುರ: ಅಕ್ಕ-ತಂಗಿ ಇಬ್ಬರು ಕೆರೆಯಲ್ಲಿ ಬಿದ್ದು ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದಿದೆ.
ಚಿಕ್ಕಬಳ್ಳಾಪುರ ತಾಲೂಕಿನ ಅಗಲಗುರ್ಕಿ ಗ್ರಾಮದ 16 ವರ್ಷದ ಅಶ್ವಿನಿ ಹಾಗೂ 14 ವರ್ಷದ ನಿಶ್ಚಿತಾ ಎಂಬ ಇಬ್ಬರು ಬಾಲಕಿಯರು, ನಗರದ ಕಂದವಾರ ಕೆರೆಯಲ್ಲಿ ಮುಳುಗಿ ಮೃತ ಪಟ್ಟಿದ್ದಾರೆ.
ಅಗಲಗುರ್ಕಿಯ ಮುನಿಸ್ವಾಮಿ ಹಾಗೂ ಮುನಿಲಕ್ಷಿ ದಂಪತಿಯ ಪುತ್ರಿಯರಾದ ಅಶ್ವಿನಿ, ನಿಶ್ಚಿತಾ, ಮುನಿಸಿಕೊಂಡು ಮನೆಯಿಂದ ಹೊರಟಿದ್ದರು.
ಈ ಇಬ್ಬರು ಶವವಾಗಿ ಕಂದವಾರ ಕೆರೆಯಲ್ಲಿ ಪತ್ತೆಯಾಗಿದ್ದಾರೆ. ಸದ್ಯ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಘಟನೆ ಸಂಬಂಧ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.