ಕಡಬ: ಪೇಟೆಗೆ ಕಂಪ್ಯೂಟರ್ ಕಲಿಯಲು ತೆರಳುತ್ತಿದ್ದ ವಿದ್ಯಾರ್ಥಿನಿಗೆ ಅನ್ಯಕೋಮಿನ ಯುವಕನೋರ್ವ ಲೈಂಗಿಕ ಕಿರುಕುಳ ನೀಡಿದ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದೂ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮೋನು ಎಂಬವರ ಪುತ್ರ ಶಾಕೀರ್ ಪ್ರಕರಣದ ಆರೋಪಿ.
ಆರೋಪಿಯು ಇಂದು ಮತ್ತು ಕಳೆದ ಶನಿವಾರ ಯುವತಿಗೆ ಕಿರುಕುಳ ನೀಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಶನಿವಾರ ಕಂಪ್ಯೂಟರ್ ತರಗತಿ ಮುಗಿಸಿ ತನ್ನ ಮನೆಯಾದ ಐತ್ತೂರು ಗೆ ಬಸ್ಸಿನಲ್ಲಿ ಹೋಗಲು ಬಸ್ಸು ನಿಲ್ದಾಣಕ್ಕೆ ನಡೆದುಕೊಂಡು ಹೋಗುತ್ತಿದ್ದಾಗ ಸ್ಕೂಟಿಯಲ್ಲಿ ಬಂದ ಆರೋಪಿಯೂ ಆಕೆಗೆ ಅಶ್ಲೀಲ ಸನ್ನೆ ಮಾಡಿದ್ದಾನೆ. ಅಲ್ಲದೇ ಆಕೆ ಬಸ್ಸು ಹತ್ತಿದ ಬಳಿಕ ಆಕೆಯನ್ನು ಸ್ಕೂಟಿಯಲ್ಲಿ ಹಿಂಬಾಲಿಸಿಕೊಂಡು ಮನೆ ಸಮೀಪದವರೆಗೆ ಬಂದಿದ್ದಾನೆ.
ಇಂದು ಮತ್ತೆ ಅದೇ ರೀತಿ ಬಸ್ಸು ನಿಲ್ದಾಣದಲ್ಲಿ ಅಶ್ಲೀಲ ಸನ್ನೆ ಮಾಡಿದ್ದು, ಬಸ್ಸನ್ನು ಹಿಂಬಾಲಿಸಿದ್ದಾನೆ . ಈ ವೇಳೆ ಸಂತ್ರಸ್ತ ವಿದ್ಯಾರ್ಥಿನಿಯೂ ಬಸ್ಸಿನಲ್ಲಿ ತನ್ನ ಆತ್ತೆಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾಳೆ. ಯುವತಿ ಬಸ್ಸಿನಿಂದ ಇಳಿಯುತ್ತಾಳೇ ಆಕೆಯನ್ನು ಹಿಂಬಾಲಿಸಿದ ಆರೋಪಿಯೂ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ . ಈ ವೇಳೆ ಆಕೆಯ ನೆರವಿಗೆ ಆತ್ತೆ ಬಂದಿದ್ದು ಆರೋಪಿ ಆಕೆಗೂ ಅವಾಚ್ಯ ಶಬ್ದಗಳಿಂದ ಬೈದು ದೂಡಿ ಹಾಕಿದ್ದಾನೆ.
ಇದೇ ಸಂದರ್ಭ ಸ್ಥಳೀಯರು ಬಂದಿದ್ದು ಆರೋಪಿಯು ಸ್ಕೂಟಿಯಲ್ಲಿ ಪರಾರಿಯಾಗಿದ್ದಾನೆ. ಸಂತ್ರಸ್ತ ಯುವತಿ ಹಿಂದೂ ಸಮುದಾಯದವಳಾಗಿದ್ದು ಆಕೆಗೆ ಕಿರುಕುಳ ನೀಡಿದವ ಮುಸ್ಲಿಂ ಸಮುದಾಯದವ ಎಂದು ತಿಳಿಯುತ್ತಲೇ ಹಿಂದೂ ಸಂಘಟನೆಯ ಕಾರ್ಯಕರ್ತರು ಠಾಣೆ ಮುಂದೆ ಜಮಾಯಿಸಿದರು ಹಾಗೂ ಆರೋಪಿಯ ವಿರುದ್ದ ಕಠಿಣ ಕಾನೂನು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.