ಪುತ್ತೂರು: ವೈದ್ಯರುಗಳು ಶಿಫಾರಸ್ಸು ಮಾಡುವ ಹಾಗೂ ಅಸಂಖ್ಯಾತ ಜನರ ನಂಬಿಕೆಯ ಪುತ್ತೂರಿನ ಚೇತನ್ ಪ್ರಕಾಶ್ ಕಜೆ ಅವರ ಮುಂದಾಳತ್ವದಲ್ಲಿ ನಡೆಯುತ್ತಿರುವ ಧನ್ವಂತರಿ ಕ್ಲಿನಿಕಲ್ ಲ್ಯಾಬೋರೇಟರಿಯ ಪುತ್ತೂರು ಪ್ರಧಾನ ಸಂಸ್ಥೆಯಲ್ಲಿ ಕರ್ನಾಟಕದಲ್ಲೇ ಪ್ರಪ್ರಥಮ ಅಳವಡಿಕೆಯಾದ ನೂತನ ಉಪಕರಣ ‘ಹೈಬಯೋಮ್ ಎಇ 180 ಸಹಿತ ಇತರ ಉಪಕರಣಗಳ ನೇರ ಪ್ರಾತ್ಯಕ್ಷಿತೆಗೆ ಹಾಗೂ ಥೈರಾಡ್ ತಪಾಸಣೆಗೆ 50% ರಿಯಾಯಿತಿ ಅನ್ನು ಮಾ.30-31ರಂದು ಅವಕಾಶ ನೀಡಲಾಗಿದೆ.
ಪುತ್ತೂರು ದರ್ಬೆ ಧನ್ವಂತರಿ ಕಾಂಪ್ಲೆಕ್ಸ್‌ನಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಧನ್ವಂತರಿ ಲ್ಯಾಬೋರೇಟರಿ ಸಂಸ್ಥೆಯು ರಕ್ತ ತಪಾಸಣೆಯಲ್ಲಿ ಹಲವು ಹೊಸ, ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿ, ರಕ್ತಪರೀಕ್ಷಾ ಇತಿಹಾಸದಲ್ಲೇ ಹೊಸ ಆಯಾಮವನ್ನೇ ಸೃಷ್ಟಿಸಿ ದಕ್ಷಿಣ ಕನ್ನಡದ ಎರಡನೇ ಅತೀದೊಡ್ಡ ಲ್ಯಾಬೋರೇಟರಿ ಎಂಬ ಹೆಗ್ಗಳಿಕೆ ಪಡೆದಿದೆ.
ದಿನದ 24 ಗಂಟೆ ವಾರದ 7 ದಿನಗಳ ನಿರಂತರ, ನಿಖರ, ತ್ವರಿತ, ಪಾರದರ್ಶಕ ಸೇವೆಯಿಂದ ವೈದ್ಯರ, ಅಸಂಖ್ಯಾತ ಜನರ ಪ್ರಶಂಸೆಗೆ ಪಾತ್ರವಾಗಿದೆ. ಸಂಪೂರ್ಣ ಸ್ವಯಂಚಾಲಿತ ತಂತ್ರಜ್ಞಾನದ ಉಪಕರಣಗಳಿಂದ ಫಲಿತಾಂಶ, ಫಲಿತಾಂಶದ ಗುಣಮಟ್ಟವನ್ನು ಕಾಯ್ದಿರಿಸಿಕೊಲ್ಳುವ ನಿಟ್ಟಿನಲ್ಲಿ ಪ್ರತಿಯೊಂದು ಉಪಕರಣಗಳಲ್ಲಿ ಇಂಟರ್ನಲ್ ಕ್ವಾಲಿಟಿ ಚೆಕಿಂಗ್‌ನ ಅಳವಡಿಕೆ ಹಾಗೂ ಎಕ್ಸ್‌ಟರ್ನಲ್ ಕ್ವಾಲಿಟಿ ಚೆಕಿಂಗ್ (ರಾಂಡಾಕ್ ಡಯಾಗ್ನೋಸ್ಟಿಕ್ ಇಂಗ್ಲೆಂಡ್ ಇದರ ಸಹಭಾಗಿತ್ವದೊಂದಿಗೆ), ಲಿಪಿಡ್ ಪ್ರೊಫೈಲ್, ಕೊಲೆಸ್ಟ್ರಾಲ್, ಟ್ರೈಗ್ಲಿಸರೈಡ್‌ನೊಂದಿಗೆ ವಿಟ್ಲ, ಪುತ್ತೂರಿನಲ್ಲಿ ಪ್ರಥಮ ಬಾರಿಗೆ ಡೈರೆಕ್ಟ್ ಹೆಚ್‌ಡಿಎಲ್ ಹಾಗೂ ಡೈರೆಕ್ಟ್ ಎಲ್‌ಡಿಎಲ್‌ನ ಅಳವಡಿಕೆ, ಮೈಕ್ರೋಬಯೋಲಜಿಯಲ್ಲಿ ಅಟೋಮೇಷನ್ ಅಳವಡಿಸಿದ ದಕ್ಷಿಣ ಕನ್ನಡದ 2ನೇ ಸಂಸ್ಥೆ, ಕರ್ನಾಟಕದಲ್ಲಿ ಪ್ರಥಮ ಬಾರಿಗೆ ನೀವಿರುವಲ್ಲೇ 5 ನಿಮಿಷದಲ್ಲಿ ಬ್ಲಡ್‌ಗ್ಯಾಸ್ ತಪಾಸಣೆ, ಬೆಂಗಳೂರು, ಮುಂಬೈ, ದೆಹಲಿ ಮುಂತಾದ ಮೆಟ್ರೋ ಸಿಟಿಗಳಲ್ಲಿ ಲಭ್ಯವಾಗುವ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಪುತ್ತೂರಿಗೆ ಪರಿಚಯಿಸಿದ ಹೆಗ್ಗಳಿಕೆಯೊಂದಿಗೆ ಅನುಭವಿ ಹಾಗೂ ವೃತ್ತಿಪರ ಸಿಬ್ಬಂದಿಗಳು ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.