ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ವಿವೇಕಾನಂದ ಅಧ್ಯಯನ ಕೇಂದ್ರ- ಯಶಸ್ ನ ನೂತನ ಆಡಳಿತ ಮಂಡಳಿಯ ಪದಗ್ರಹಣ ಸಮಾರಂಭ ಇತ್ತೀಚೆಗೆ ನಡೆಯಿತು. ನೂತನ ಅಧ್ಯಕ್ಷರಾಗಿ ಕೃಷ್ಣ ನಾರಾಯಣ ಮುಳಿಯ, ಕಾರ್ಯದರ್ಶಿಯಾಗಿ ಉಮೇಶ್ ನಾಯಕ್ ಜವಾಬ್ದಾರಿ ಸ್ವೀಕರಿಸಿದರು.
ಇವರೊಂದಿಗೆ ಕೋಶಾಧಿಕಾರಿಯಾಗಿ ಮೂಲಚಂದ್ರ ಮತ್ತು ಸದಸ್ಯರಾಗಿ ಕೆ. ಯಸ್ ಸುರೇಶ್, ನವೀನ ಪ್ರಸಾದ್ ರೈ, ವಿದ್ಯಾ ಆರ್ ಗೌರಿ, ಯಶಸ್ವಿನಿ ಶಾಸ್ರಿ ನೆಕ್ಕರೆ, ರಮೇಶ್ ನಾಯಕ್ ಜವಾಬ್ದಾರಿ ಸ್ವೀಕರಿಸಿದರು. ಜವಾಬ್ದಾರಿಯನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಡಾ. ಕೆ. ಎಂ. ಕೃಷ್ಣ ಭಟ್ ಅವರು ಹಸ್ತಾಂತರಿಸಿದರು.
ವಿವೇಕಾನಂದ ಅಧ್ಯಯನ ಕೇಂದ್ರ -ಯಶಸ್ ಐಎಎಸ್ ಕೆಎಎಸ್ ಪರೀಕ್ಷೆಗಳಿಗೆ ತರಬೇತಿಗೆ ನೀಡುತ್ತಿದ್ದು, ಇದು ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇದರ ಅಂಗ ಸಂಸ್ಥೆಯಾಗಿದೆ.