ಬೆಂಗಳೂರು: ಬೆಂಗಳೂರಿನಲ್ಲಿ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ವಿಟ್ಲ ಮೂಲದ ಓರ್ವ ಹಾಗೂ ಬೆಂಗಳೂರಿನ ಓರ್ವನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ವಿಟ್ಲಪಡ್ನೂರು ಕೊಡಂಗಾಯಿ ನಿವಾಸಿ ಹಸನ್ ಸಾದಿಕ್(ಬ್ಲೇಡ್ ಸಾದಿಕ್), ಬೆಂಗಳೂರಿನ ತಲ್ಲಾಖಾನ್ ಎಂದು ಗುರುತಿಸಲಾಗಿದೆ.
ನಾಗೇನಹಳ್ಳಿಯ ರೈಲ್ವೆ ಟ್ರಾಕ್ ಬಳಿ ಇಬ್ಬರು ಆರೋಪಿಗಳು ಬೈಕ್ ನಲ್ಲಿ ಮಾದಕ ವಸ್ತುಗಳನ್ನಿಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ದೊರೆತ ಮೇರೆಗೆ ದಾಳಿ ನಡೆಸಿದ ಪೊಲೀಸರು, ಇಬ್ಬರು ಆರೋಪಿಗಳನ್ನು ಹಾಗೂ 23ಗ್ರಾಂ ಎಂ.ಡಿ. ಎಂ. ಎ ಹಾಗೂ ಕೃತ್ಯಕ್ಕೆ ಬಳಸಿದ ರಾಯಲ್ ಎನ್ ಫೀಲ್ಡ್ ಬೈಕ್ ಅನ್ನು ವಶ ಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.