ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಸೋಪೋರ್ ನಲ್ಲಿರುವ ಕೇಂದ್ರೀಯ ಮೀಸಲು ಪೊಲೀಸ್ ಪಡೆ ಬಂಕರ್ ಮೇಲೆ ಮಂಗಳವಾರ ಸಂಜೆ ಬುರ್ಖಾಧಾರಿ ಮಹಿಳೆಯೊಬ್ಬರು ಬಾಂಬ್ ಎಸೆದು ಪರಾರಿಯಾಗುತ್ತಿರುವುದು ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಬಂಕರ್ ಎದುರಿನ ರಸ್ತೆಯಲ್ಲಿ ನಡೆದು ಬರುವ ಮಹಿಳೆ ಒಂದರೆಕ್ಷಣ ನಿಂತು, ತನ್ನ ಬ್ಯಾಗ್‌ನಿಂದ ಬಾಂಬ್ ಹೊರ ತೆಗೆದು ಶಿಬಿರದ ಕಡೆಗೆ ಎಸೆದಿದ್ದಾಳೆ. ಬಾಂಬ್ ಎಸೆದ ಕೂಡಲೇ ಆಕೆ ಸ್ಥಳದಿಂದ ಓಡಿಹೋಗುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಬಾಂಬ್ ಶಿಬಿರದ ಹೊರಭಾಗದಲ್ಲಿ ಬಿದ್ದಿದ್ದರಿಂದ ಯಾವುದೇ ಹಾನಿಗಳು ಸಂಭವಿಸಿಲ್ಲ.
ಮಹಿಳೆಯನ್ನು ಗುರುತಿಸಲಾಗಿದೆ. ಶೀಘ್ರದಲ್ಲೇ ಆಕೆಯನ್ನು ಬಂಧಿಸಲಾಗುವುದು ಎಂದು ಕಾಶ್ಮೀರ ಪೊಲೀಸ್ ಮಹಾನಿರೀಕ್ಷಕ (ಐಜಿಪಿ) ವಿಜಯ್ ಕುಮಾರ್ ಹೇಳಿದ್ದಾರೆ.
#WATCH Bomb hurled at CRPF bunker by a burqa-clad woman in Sopore yesterday#Jammu&Kashmir
— ANI (@ANI) March 30, 2022
(Video source: CRPF) pic.twitter.com/Pbqtpcu2HY