ಚಿಕ್ಕಮಗಳೂರು: ಯುಗಾದಿ ದಿನದಂದೇ ನವವಿವಾಹಿತೆ ಬಲಿಯಾದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಾರಬೈಲು ಗ್ರಾಮದಲ್ಲಿ ನಡೆದಿದೆ.
ಎನ್.ಆರ್ ಪುರ ತಾಲೂಕಿನ ಬನ್ನೂರು ಗ್ರಾಮದ ಗಾನವಿ ಸಾವನ್ನಪ್ಪಿರೋ ಮಹಿಳೆಯಾಗಿದ್ದು, ಪತಿ ನಂದಿತ್, ಅತ್ತೆ ಸಾವಿತ್ರಮ್ಮ, ಮಾವ ಚಂದ್ರೆಗೌಡ ವಿಷ ಕುಡಿಸಿ ಗಾನವಿಯನ್ನ ಕೊಲೆ ಮಾಡಿರುವ ಆರೋಪವು ಕೇಳಿ ಬಂದಿದೆ.
ಕಳೆದ ವರ್ಷವಷ್ಟೇ ನಂದೀತ್ ಗಾನವಿಯನ್ನ ಮದುವೆಯಾಗಿದ್ದು, ಅನೇಕ ಬಾರಿ ಹಣ ತರುವಂತೆ ದೈಹಿಕ ಕಿರುಕುಳ ನೀಡಿ ಪೀಡಿಸುತ್ತಿದ್ದ ಎಂದು ಆರೋಪಿಸಲಾಗಿದೆ. ಸದ್ಯ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.