ಉಪ್ಪಿನಂಗಡಿ: ಹಿಂದೂ ಯುವತಿ ಹಾಗೂ ಅನ್ಯಕೋಮಿನ ಯುವಕ ಕಾಡಿನ ಪೊದೆಯಲ್ಲಿದ್ದ ವೇಳೆ ಸಾರ್ವಜನಿಕರು ಪತ್ತೆ ಹಚ್ಚಿ ಪೊಲೀಸರ ವಶಕ್ಕೆ ಒಪ್ಪಿಸಿರುವ ಘಟನೆ ಎ.5 ರಂದು ನಡೆದಿದೆ.
ಪುತ್ತೂರು ಮೂಲದ ಮುಸ್ಲಿಂ ಯುವಕ ಹಾಗೂ ವೇಣೂರು ಮೂಲದ ಹಿಂದೂ ಯುವತಿ ಜೊತೆಯಾಗಿ ರಿಕ್ಷಾದಲ್ಲಿ ಬಂದವರು ಗುಂಡ್ಯ-ಸುಬ್ರಹ್ಮಣ್ಯ ರಸ್ತೆಯ ಗುಂಡ್ಯ ಸಮೀಪದ ದೇರಣೆ ಕ್ರಾಸ್‌ನಲ್ಲಿ ರಿಕ್ಷಾ ನಿಲ್ಲಿಸಿ ಸಮೀಪದ ಗುಡ್ಡ ಪ್ರದೇಶಕ್ಕೆ ತೆರಳಿದ್ದರು ಎಂದು ಹೇಳಲಾಗಿದೆ. ಇದನ್ನು ಗಮನಿಸಿದ ಸ್ಥಳೀಯರು ಇಬ್ಬರನ್ನು ಅಲ್ಲಿಂದ ಕರೆ ತಂದು ನೆಲ್ಯಾಡಿ ಹೊರಠಾಣೆ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ.
 
	    	




























