ಉಪ್ಪಿನಂಗಡಿ: ಹಿಂದೂ ಯುವತಿ ಮತ್ತು ಅನ್ಯಕೋಮಿನ ಯುವಕನ ಜೋಡಿಯನ್ನು ಗುಂಡ್ಯ ಸಮೀಪ ಸಾರ್ವಜನಿಕರು ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ನಡೆದಿದ್ದು, ಈ ಬಗ್ಗೆ ಯುವಕ ಕೆಲವರ ಮೇಲೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಸಿರಿಬಾಗಿಲು ಅನಿಲ ಮನೆ ನಿವಾಸಿ ಬಾಲಚಂದ್ರ(35), ಸಿರಿಬಾಗಿಲು ದೇರಣೆ ನಿವಾಸಿ ರಂಜಿತ್(31) ಬಂಧಿತರು.
ಆಟೋರಿಕ್ಷಾದಲ್ಲಿ ತಾನು ಪ್ರೀತಿ ಮಾಡುತ್ತಿದ್ದ ಹುಡುಗಿಯನ್ನು ಕುಳ್ಳಿರಿಸಿಕೊಂಡು ಉಪ್ಪಿನಂಗಡಿಯಿಂದ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಾಯಿಸಿಕೊಂಡು ಗುಂಡ್ಯಕ್ಕೆ ಬಂದು ಗುಂಡ್ಯದಿಂದ ಸುಬ್ರಹ್ಮಣ್ಯ ರಸ್ತೆಯಲ್ಲಿ ಚಲಾಯಿಸಿಕೊಂಡು ಹೋಗುತ್ತ ಕಡಬ ತಾಲೂಕು ಸಿರಿಬಾಗಿಲು ಗ್ರಾಮದ ದೇರಣೆ ಎಂಬಲ್ಲಿಗೆ ತಲುಪುವಾಗ ಸುರೇಂದ್ರ, ತೀರ್ಥಪ್ರಸಾದ್ ಜಿತೇಶ್ ಮತ್ತು ಇತರರು ಆಟೋರಿಕ್ಷಾವನ್ನು ತಡೆದು ನಿಲ್ಲಿಸಿ “ ನೀವು ಎಲ್ಲಿಗೆ ಹೋಗುತ್ತಿದ್ದೀರಿ ? ನಿಮ್ಮ ಹೆಸರೇನು ಎಂದು ಹೇಳಿದಾಗ ತಮ್ಮ ಹೆಸರನ್ನು ಹೇಳಿದಾಗ ಆರೋಪಿತರು ಅವಾಚ್ಯ ಶಬ್ದದಿಂದ ಬೈದು, ನಡೆಸಿದ್ದು, ಅಷ್ಟೇ ಅಲ್ಲದೇ ಜೊತೆಗಿದ್ದ ಯುವತಿಗೂ ಬೈದು ಜೀವ ಬೆದರಿಕೆ ಹಾಕಿದ್ದಾರೆ ಎಂದು ನಜೀರ್ ದೂರಿನಲ್ಲಿ ತಿಳಿಸಿದ್ದ.
ಈ ಬಗ್ಗೆ ಠಾಣೆಯಲ್ಲಿ ಅ.ಕ್ರ 47/2022 ಕಲಂ:143 147 341 504 323 324 506 153(a) R/W. 149 ಐಪಿಸಿ ಯಂತೆ ಪ್ರಕರಣ ದಾಖಲಾಗಿದೆ.