ಉಪ್ಪಿನಂಗಡಿ: ಗುಂಡ್ಯ ಕಾಡಿನಲ್ಲಿ ಜೊತೆಗಿದ್ದ ಅನ್ಯಕೋಮಿನ ಯುವಕ ಹಾಗೂ ಹಿಂದೂ ಯುವತಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆಗೆ ಸಂಬಂಧಿಸಿದಂತೆ ಹಿಂದೂ ಯುವಕರನ್ನು ಬಂಧಿಸಿದ್ದು, ಈ ಹಿನ್ನೆಲೆ ಆಕ್ರೋಶಗೊಂಡ ಹಿಂದೂ ಸಂಘಟನೆ ಕಾರ್ಯಕರ್ತರು ತಡರಾತ್ರಿ ಇಂದು ಸಮಿತಿ ಸಭೆ ಇರುವ ಕಾರಣ ಬೆಂಗಳೂರಿಗೆ ತೆರಳುತ್ತಿದ್ದ ಶಾಸಕ ಸಂಜೀವ ಮಠಂದೂರು ರವರಿದ್ದ ಬಸ್ ಅನ್ನು ತಡೆದು ಗದ್ದಲ ಸೃಷ್ಟಿಸಿದ್ದಾರೆ ಎಂದು ತಿಳಿದು ಬಂದಿದೆ.
ಗುಂಡ್ಯ ಕಾಡಿನಲ್ಲಿ ಜೊತೆಗಿದ್ದ ಅನ್ಯಕೋಮಿನ ಯುವಕ ಹಾಗೂ ಹಿಂದೂ ಯುವತಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆಗೆ ಸಂಬಂಧಿಸಿದಂತೆ ಯುವಕ ನೀಡಿದ ದೂರಿನ ಮೇರೆಗೆ ಕೆಲ ಹಿಂದೂ ಯುವಕರನ್ನು ಪೊಲೀಸರು ಬಂಧಿಸಿದ್ದಾರೆ.
ಹಿಂದೂ ಯುವಕರನ್ನು ಬಂಧಿಸಿದ ಹಿನ್ನೆಲೆ ಆಕ್ರೋಶಗೊಂಡ ಹಿಂದೂ ಸಂಘಟನೆ ಕಾರ್ಯಕರ್ತರು ತಡರಾತ್ರಿ ಬೆಂಗಳೂರಿಗೆ ಸಮಿತಿ ಸಭೆಗೆ ತೆರಳುತ್ತಿದ್ದ ಶಾಸಕ ಸಂಜೀವ ಮಠಂದೂರು ರವರಿದ್ದ ಬಸ್ಸನ್ನು ತಡೆದು ಯುವಕರನ್ನು ಈ ಕೂಡಲೇ ಬಿಡುಬಿಡುಗಡೆಗೊಳಿಸಬೇಕೆಂದು ಆಕ್ರೋಶ ವ್ಯಕ್ತಪಡಿಸಿ, ಕೆಲಕಾಲ ಸ್ಥಳದಲ್ಲಿ ಗದ್ದಲ ಸೃಷ್ಟಿಸಿದ್ದು, ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು ಎಂದು ತಿಳಿದು ಬಂದಿದೆ.