ವಿಟ್ಲ: ಭಾರತೀಯ ಜನತಾ ಪಾರ್ಟಿಯ ಸ್ಥಾಪನಾ ದಿನಾಚರಣೆಯ ಕಾರ್ಯಕ್ರಮವು ಪುತ್ತೂರು ವಿಧಾನಸಭಾ ಕ್ಷೇತ್ರದ ವಿಟ್ಲ 4 ನೇ ಬೂತಿನಲ್ಲಿ ನಡೆಯಿತು.
ಬಿಜೆಪಿ ಪಕ್ಷ ಬೆಳೆದು ಬಂದ ಹಾದಿಯನ್ನು ಪಟ್ಣಣ ಪಂಚಾಯತ್ ಮಾಜಿ ಸದಸ್ಯ ಶ್ರೀಕೃಷ್ಣ ವಿಟ್ಲ ವಿವರಿಸಿದರು.
ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯತ್ ಸದಸ್ಯೆ ಸಂಗೀತ ಪಾಣೆಮಜಲು, ಬೂತ್ ಅಧ್ಯಕ್ಷ ಭೋಜರಾಜ್ ಮಣಿಯಾಣಿ, ಪ್ರಧಾನ ಕಾರ್ಯದರ್ಶಿ ಹರೀಶ್ ಸೀಗೆಬಲ್ಲೆ, ಮಹಾಶಕ್ತಿ ಕೇಂದ್ರ ಸದಸ್ಯ ಜಗದೀಶ್ ಪಾಣೆಮಜಲು, ಸದಸ್ಯರಾದ ಕಿಟ್ಟಣ್ಣ ಸೀಗೆಬಲ್ಲೆ, ಬಾಬು ಮಡಿವಾಳ, ಶಂಕರ ಮೇಸ್ತ್ರಿ, ಸುರೇಶ್, ಚಿನ್ಮಯ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.