ಉಡುಪಿ: ಸಿಟಿ ಬಸ್ ನಿಲ್ದಾಣದಲ್ಲಿ ಟೈಮಿಂಗ್ಸ್ ವಿಚಾರದಲ್ಲಿ ಎರಡು ಬಸ್ಸಿನ ನಿರ್ವಾಹಕರ ಮಧ್ಯೆ ಬೀದಿ ಕಾಳಗ ನಡೆದಿದೆ.
ಉಡುಪಿ, ಕೆಮ್ಮಣ್ಣು ಎಂಬ ಕಡೆಗೆ ತೆರಳುವ ಈ ಎರಡು ಬಸ್ಸುಗಳ ಕಂಡೆಕ್ಟರ್ಗಳು ಟೈಮಿಂಗ್ಸ್ ವಿಚಾರದಲ್ಲಿ ಜಗಳ ಶುರು ಮಾಡಿಕೊಂಡಿದ್ದಾರೆ. ಜಗಳ ಜೋರಾಗಿ ಬಳಿಕ ಪ್ರಯಾಣಿಕರ ಎದುರೇ ಬೀದಿ ಜಗಳ ಮಾಡಿಕೊಂಡಿದ್ದಾರೆ. ಘಟನೆಯು ಸಾರ್ವಜನಿಕರ ಅಶಾಂತಿಗೆ ಕಾರಣವಾಗಿದೆ.
ಪ್ರಯಾಣಿಕರೊಬ್ಬರು ತೆಗೆದ ಜಗಳದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗಿದೆ. ಸಾರ್ವಜನಿಕ ಶಾಂತಿ ಭಂಗ ಮಾಡಿರುವ ಹಿನ್ನಲೆಯಲ್ಲಿ ಪೊಲೀಸ್ ಇಲಾಖೆ ಕ್ರಮಕೈಗೊಳ್ಳುವಂತೆ ಆಗ್ರಹ ವ್ಯಕ್ತವಾಗಿದೆ.
ಉಡುಪಿ, ಮಂಗಳೂರು ಹಾಗೂ ಕರಾವಳಿ ಭಾಗದ ಹಲವೆಡೆ ಖಾಸಗಿ ಬಸ್ಗಳ ಪ್ರಾಬಲ್ಯ ಇದೆ. ಈ ನಗರಗಳಲ್ಲಿ ಸೆಕೆಂಡ್ಗಳ ಲೆಕ್ಕದಲ್ಲಿಯೂ ಬಸ್ಗಳು ಸಂಚಾರ ಮಾಡುತ್ತವೆ. ಉಡುಪಿಯಲ್ಲಿ ಕೂಡ ಅದೇ ವಿಚಾರಕ್ಕೆ ಸಂಬಂಧಿಸಿ ಹೊಡೆದಾಟ ನಡೆದಿದೆ. ಇಬ್ಬರು ನಿರ್ವಾಹಕರ ನಡುವೆ ಬಸ್ ಸಮಯದ ವಿಷಯಕ್ಕೆ ಬೀದಿ ಜಗಳ ನಡೆದಿದೆ.