ಮಂಗಳೂರು: ಮೂವರು ಮಕ್ಕಳೊಂದಿಗೆ ಮಹಿಳೆಯೊಬ್ಬರು ನಾಪತ್ತೆಯಾಗಿದ್ದು, ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕೃಷ್ಣಾಪುರ ಪೆರ್ನೆತೋಟದ ಜುಮ್ಮಾ ಮಸೀದಿ ಬಳಿ ವಾಸವಿರುವ ಯು.ಕೆ.ಸಲೀಂ ಎಂಬವರ ಪತ್ನಿ ಜೀನತ್ (34) ಅವರ ಮಕ್ಕಳಾದ ಮೊಯ್ದೀನ್ ಅಬ್ದುಲ್ ಸಮದ್ (11), ನೆಬಿಸಾ ಸಫ್ನಾಜ್ (10) ಮತ್ತು ಮೊಹಮ್ಮದ್ ತೆಹನಾಜ್ (7) ನಾಪತ್ತೆಯಾದ್ದಾರೆ.
ಜೀನತ್ ತನ್ನ ಮನೆಯಿಂದ ಮಾ. 31 ರಂದು ಬೆಳಿಗ್ಗೆ 10 ಗಂಟೆಗೆ ಕೃಷ್ಣಾಪುರ ಬದ್ರಿಯಾ ಶಾಲೆಗೆ ಹೋಗಿ ತನ್ನ ಎಲ್ಲಾ ಮೂರು ಮಕ್ಕಳನ್ನು ಕರೆದುಕೊಂಡು ನಂತರ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.
ಜೀನತ್ ಕಳೆದ ಎಂಟು ಒಂಬತ್ತು ತಿಂಗಳಿಂದ ಅನೈತಿಕ ಸಂಬಂಧ ಹೊಂದಿರುವ ನೆರೆಹೊರೆಯವರೊಂದಿಗೆ ಹೋಗಿರಬೇಕು ಎಂದು ಜೀನತ್ ಅವರ ಪತಿ ಸಲೀಂ ಅವರು ತಮ್ಮ ದೂರಿನಲ್ಲಿ ಶಂಕೆ ವ್ಯಕ್ತ ಪಡಿಸಿದ್ದಾರೆ.