ವಿಟ್ಲ: ಭಾರತೀಯ ಜನತಾ ಪಾರ್ಟಿಯ ಸಂಸ್ಥಾಪನಾ ದಿನಾಚರಣೆಯು ವಿಟ್ಲ ಪಟ್ಟಣ ಪಂಚಾಯತ್ ನ 14 ನೇ ವಾರ್ಡಿನಲ್ಲಿ ಹಿರಿಯ ಕಾರ್ಯಕರ್ತ, ವ್ಯವಸಾಯ ಬ್ಯಾಂಕ್ ನಿರ್ದೇಶಕ ಶಿವಪ್ಪ ನಾಯ್ಕ್ ರವರ ಮನೆಯಲ್ಲಿ ಜರುಗಿತು.
ಕಾರ್ಯಕ್ರಮದಲ್ಲಿ ವಾರ್ಡಿನ ಪಟ್ಟಣ ಪಂಚಾಯತ್ ಸದಸ್ಯ ಅಶೋಕ್ ಕುಮಾರ್ ಶೆಟ್ಟಿಯವರು ಅಧ್ಯಕ್ಷತೆ ವಹಿಸಿದ್ದರು.
ಪ್ರಮುಖರಾದ ನಗರ ಯುವಮೋರ್ಚಾ ಅಧ್ಯಕ್ಷ ಸುರೇಶ್ ಶಿವಾಜಿನಗರ, ಕುಶಾಲಪ್ಪ, ಮಹೇಶ್ ಗೌಡ, ಸುಂದರ ನಾಯ್ಕ್, ಚೇತನ್ ಉಪಸ್ಥಿತರಿದ್ದರು. ರಾಧಾಕೃಷ್ಣ ಗೌಡ ಕೂಡೂರು ಸ್ವಾಗತಿಸಿ, ವಾರ್ಡ್ ಅಧ್ಯಕ್ಷ ಶಿಶಿರ್ ಕೂಡೂರು ವಂದಿಸಿದರು.