ಪುತ್ತೂರು: ಕುಂಜಾಡಿ ಮನೆಯಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇವರಿಂದ ಯಕ್ಷಗಾನ ಬಯಲಾಟ ಮತ್ತು ಶ್ರೀ ರಕ್ತೇಶ್ವರಿ, ಕಲ್ಲುರ್ಟಿ ಮತ್ತು ಗುಳಿಗ ದೈವಗಳಿಗೆ ನೇಮೋತ್ಸವವು ಎ.9 ಮತ್ತು 10 ರಂದು ನಡೆಯಲಿದೆ.
ಎ.9 ರಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇವರಿಂದ ಕುಂಜಾಡಿ ಮನೆಯಲ್ಲಿ ರಚಿಸಿರುವ ವಿದ್ಯುದ್ದೀಪಾಲಂಕೃತ ಭವ್ಯ ರಂಗಮಂಟಪದಲ್ಲಿ ನೂತನ ಪ್ರಸಂಗವನ್ನು ಬಯಲಾಟವಾಗಿ ಆಡಿ ತೋರಿಸಲಿದ್ದಾರೆ.
ಎ.10 ರಂದು ಕುಂಜಾಡಿ ಮನೆಯಲ್ಲಿ ರಕ್ತೇಶ್ವರಿ, ಕಲ್ಲುರ್ಟಿ ಮತ್ತು ಗುಳಿಗ ದೈವಗಳಿಗೆ ನೇಮೋತ್ಸವವು ನಡೆಯಲಿದೆ.
ಎ.11 ರಂದು ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ನೇತೃತ್ವದ ಚಾಪರ್ಕ ಕಲಾವಿದರಿಂದ ‘ಪನಿಯರ ಆವಂದಿನ’ ತುಳು ಹಾಸ್ಯ ನಾಟಕ ಮೂಡುಬರಲಿದೆ.




























