ಶಿವಮೊಗ್ಗ: ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣದ ಬಳಿಕ ಹರ್ಷ ಕುಟುಂಬಸ್ಥರಿಂದ ಹರ್ಷ ಚಾರಿಟಬಲ್ ಟ್ರಸ್ಟ್ ಕಾರ್ಯಾರಂಭ ಮಾಡಿದೆ.
ಹರ್ಷ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷರಾಗಿ ಮೃತ ಹರ್ಷನ ಸಹೋದರಿ ಅಶ್ವಿನಿ, ಕಾರ್ಯದರ್ಶಿಯಾಗಿ ಸಚಿವ ಈಶ್ವರಪ್ಪ ಪುತ್ರ ಕೆ.ಇ. ಕಾಂತೇಶ್ ಆಯ್ಕೆಯಾಗಿದ್ದಾರೆ. ಸಾಮಾಜಿಕವಾಗಿ, ಆರ್ಥಿಕವಾಗಿ ನೊಂದವರಿಗೆ ಟ್ರಸ್ಟ್ ಮೂಲಕ ನೆರವು ನೀಡುವುದು ಟ್ರಸ್ಟ್ ಉದ್ದೇಶವಾಗಿದೆ. ಈ ಸಂಬಂಧ ಹರ್ಷ ಕುಟುಂಬಸ್ಥರು ಮತ್ತು ಕೆ.ಇ. ಕಾಂತೇಶ್ ಜಂಟಿ ಪತ್ರಿಕಾಗೋಷ್ಠಿ ಮೂಲಕ ಈ ಘೋಷಣೆ ಮಾಡಿದ್ದಾರೆ.
ಹರ್ಷ ಮೃತಪಟ್ಟ ಬಳಿಕ ನಮ್ಮ ಕುಟುಂಬಕ್ಕೆ ಅನೇಕರು ಸಹಾಯ ಮಾಡಿದ್ದಾರೆ. ಸಂಗ್ರಹವಾದ ಹಣದ ಸದ್ಭಳಕೆ ಮಾಡುವ ನಿರ್ಧಾರವನ್ನು ಹರ್ಷ ಕುಟುಂಬ ತೆಗೆದುಕೊಂಡಿದೆ.
ಹರ್ಷ ಟ್ರಸ್ಟ್ ನಿಂದ 2015ರಲ್ಲಿ ಪಿಎಫ್ಐ ಸಂಘಟನೆಯ ಗಲಭೆಯಲ್ಲಿ ಮೃತಪಟ್ಟ ವಿಶ್ವನಾಥ್ ಮಗನ ವಿದ್ಯಾಭ್ಯಾಸದ ಜವಾಬ್ದಾರಿ ಹೊತ್ತುಕೊಳ್ಳುತ್ತದೆ.
ಕಾಸರಗೋಡಿನಲ್ಲಿ ಮೃತ ಆರ್ ಎಸ್ ಎಸ್ ಕಾರ್ಯಕರ್ತ ಜ್ಯೋತಿಶ್ ಕುಟುಂಬಕ್ಕೆ 2 ಲಕ್ಷ ರೂಪಾಯಿ ಸಹಾಯ ನೀಡಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದರು.