ವಿಟ್ಲ: ವಿಷಸೇವಿಸಿ ಬಾವಿಗೆ ಹಾರಿ ಆತ್ಮಹತ್ಯೆಗೆಯತ್ನಿಸಿದ ಕೆ.ಎಸ್.ಆರ್.ಟಿ.ಸಿ. ಸಿಬ್ಬಂದಿಯೋರ್ವರು ಚಿಕಿತ್ಸೆಗೆ ಸ್ಪಂಧಿಸದೆ ಮೃತಪಟ್ಟ ಘಟನೆ ಬಂಟ್ವಾಳ ತಾಲೂಕು ಮಾಣಿ ಗ್ರಾಮದ ಸೂರಿಕುಮೇರು ಪಡ್ಪು ಎಂಬಲ್ಲಿ ನಡೆದ ಬಗ್ಗೆ ವರದಿಯಾಗಿದೆ.
ಬಂಟ್ವಾಳ ತಾಲೂಕು ಮಾಣಿ ಗ್ರಾಮದ ಸೂರಿಕುಮೇರು ಪಡ್ಪು ನಿವಾಸಿ ಜನಾರ್ಧನ ಮೂಲ್ಯ ಪಿ (54)ರವರು ಮೃತಪಟ್ಟವರಾಗಿದ್ದಾರೆ.
ಮಂಗಳೂರು ಕೆಎಸ್‌ಆರ್‌ಟಿಸಿ ಡಿಪೋದಲ್ಲಿ ಟಿಸಿಯಾಗಿ ಕೆಲಸ ಮಾಡಿಕೊಂಡಿರುವ ಜನಾರ್ಧನ ರವರು ಏ.17 ರಂದು ಕೆಲಸ ಮುಗಿಸಿ ರಾತ್ರಿ ಮನೆಗೆ ಬಂದವರು ಏ.೧೮ರಂದು ರಂದು ಕೆಲಸಕ್ಕೆ ತೆರಳದೆ ಮನೆಯಲ್ಲಿಯೇ ಇದ್ದರು. ಮದ್ಯಾಹ್ನದ ವೇಳೆ ಯಾವುದೋ ವಿಷ ಪದಾರ್ಥ ಸೇವಿಸಿ ಮನೆ ಹತ್ತಿರದ ಬಾವಿಗೆ ಹಾರಿದ್ದರು. ಇದನ್ನು ಕಂಡ ಅವರ ಪತ್ನಿ ರೇಣುಕಾರವರು ಹಾಗೂ ಅವರ ಪುತ್ರ ಪ್ರಜ್ವಲ್ ರವರು ಹಗ್ಗದ ಸಹಾಯದಿಂದ ಅವರನ್ನು ಮೇಲಕ್ಕೆತ್ತಿ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಗೆ ಕರೆದೊಯ್ದು ಬಳಿಕ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಚಿಕಿತ್ಸೆಗೆ ಸ್ಪಂಧಿಸದ ಜನಾರ್ಧನರವರು ಏ.೧೯ರಂದು ಮೃತಪಟ್ಟಿದ್ದಾರೆ.
ಈ ಬಗ್ಗೆ ಮೃತರ ಪುತ್ರ ಪ್ರಜ್ವಲ್ ರವರು ನೀಡಿದ ದೂರಿನಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.