ಉಡುಪಿ: ಕೆಲ ದಿನಗಳ ಹಿಂದೆ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡ ಉಡುಪಿಯ ಶಾಂಭವಿ ಲಾಡ್ಜ್‌ನಲ್ಲಿ ಮತ್ತೋರ್ವ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಆತ್ಮಹತ್ಯೆಗೆ ಶರಣಾದ ಯುವಕನನ್ನು ಮಂಗಳೂರು ಕೊಣಾಜೆಯ, ಮೆಡಿಕಲ್ ರೆಪ್ ಶರಣ್ ರಾಜ್ (31) ಎಂದು ಗುರುತಿಸಲಾಗಿದೆ.
ಸಂತೋಷ್ ಆತ್ಮಹತ್ಯೆ ನಂತರ ಎರಡು ದಿನದ ಹಿಂದಷ್ಟೇ ಲಾಡ್ಜಿನ ಹೆಸರು ಬದಲಾಯಿಸಲಾಗಿದ್ದು, ಲಾಡ್ಜ್ ದ್ವಾರದ ದಿಕ್ಕು ಬದಲಾಯಿಸಲು ಯೋಜಿಸಲಾಗಿತ್ತು. ಉಡುಪಿ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿದ್ದಾರೆ.