ಪುತ್ತೂರು: ಈಶ್ವರಮಂಗಲ ಪಡುವನ್ನೂರು ಗ್ರಾಮದ ಸಾರಕೂಟೇಲು ನಿವಾಸಿ ಪ್ರದೀಪ್ ಗೌಡ ಎಂಬವರು ಬಿಜಾಪುರದ ವಸತಿ ಗೃಹವೊಂದರಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ.
ಲೋಕೋಪಯೋಗಿ ಇಲಾಖೆಯ ನಿವೃತ್ತ ಇಂಜಿನಿಯರ್ ಸಾರಕೂಟೇಲು ನಿವಾಸಿ, ಮುತ್ತಪ್ಪ ಗೌಡರ ಹಿರಿಯ ಪುತ್ರ ಪ್ರದೀಪ್ ಗೌಡರು ಕುಟುಂಬ ಸಮೇತ ಬೆಂಗಳೂರಿನಲ್ಲಿ ನೆಲೆಸಿದ್ದು, ಕಳೆದ ಕೆಲವು ದಿನಗಳಿಂದ ನಾಪತ್ತೆಯಾಗಿದ್ದರು. ಈ ಬಗ್ಗೆ ಅವರ ಸಹೋದರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಏ.18 ರಂದು ಬಿಜಾಪುರದ ವಸತಿಗೃಹವೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ.
ಮೃತರು ತಂದೆ ಮುತ್ತಣ್ಣ ಗೌಡ, ಪತ್ನಿ, ಇಬ್ಬರು ಹೆಣ್ಣು ಮಕ್ಕಳು, ಇಬ್ಬರು ಸಹೋದರರು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.