ಪುತ್ತೂರು: ವಾಹನವೊ೦ದರಲ್ಲಿ ತ್ಯಾಜ್ಯಗಳನ್ನು ತಂದು ರಸ್ತೆ ಬದಿಯಲ್ಲಿ ಸುರಿಯುತ್ತಿದ್ದ ವೇಳೆ ದಾಳಿ ನಡೆಸಿದ ಗ್ರಾ.ಪಂ ಅಧಿಕಾರಿಗಳು ತ್ಯಾಜ್ಯ ಎಸೆಯಲು ಬ೦ದವರನ್ನು ರೆಡ್ ಹ್ಯಾಂಡ್ ಆಗಿ ಹಿಡಿದ ಘಟನೆ ಮು೦ಡೂರು ಗ್ರಾ.ಪಂ ವ್ಯಾಪ್ತಿಯ ರೆನ್ಯ ಎಂಬಲ್ಲಿ ಎ.19ರಂದು ನಡೆದಿದೆ.
ರೆನ್ಯ ಎಂಬಲ್ಲಿ ಅಪರಿಚಿತ ವಾಹನವೊಂದರಲ್ಲಿ ಬ೦ದವರು ತ್ಯಾಜ್ಯ ಡಂಪಿಂಗ್ ಮಾಡುತ್ತಿರುವುದನ್ನು ಗಮನಿಸಿದ ಸ್ಥಳೀಯರು ಕೂಡಲೇ ಮುಂಡೂರು ಗ್ರಾ.ಪಂ.ಗೆ ಮಾಹಿತಿ ನೀಡಿದ್ದರು.
ಕೂಡಲೇ ಕಾರ್ಯ ಪ್ರವೃತ್ತರಾದ ಗ್ರಾ.ಪಂ ಅಧ್ಯಕ್ಷೆ ಪುಷ್ಪಾ ಎನ್ ಹಾಗೂ ಸದಸ್ಯ ಉಮೇಶ್ ಗೌಡ ಅಂಬಟ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಗೀತಾ ಬಿ.ಎಸ್ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿದಾಗ ತ್ಯಾಜ್ಯ ಸುರಿಯುತ್ತಿರುವುದು ಕಂಡು ಬಂದಿದೆ.
ತ್ಯಾಜ್ಯ ಸುರಿಯುತ್ತಿದ್ದ ತಂಡವನ್ನು ವಿಚಾರಿಸಿದಾಗ ಪುತ್ತೂರಿನಿ೦ದ ನಾವು ತ್ಯಾಜ್ಯ ತುಂಬಿಸಿಕೊಂಡು ಬಂದಿದ್ದು ಇಲ್ಲಿ ನಿರ್ಜನ ಪ್ರದೇಶ ಎಂಬ ಕಾರಣಕ್ಕೆ ಇಲ್ಲಿ ಸುರಿದು ಹೋಗಲು ನಿರ್ಧರಿಸಿದ್ದೆವು ಎಂದು ತಿಳಿಸಿದ್ದಾರೆ. ನಂತರ ವಾಹನವನ್ನು ವಶಕ್ಕೆ ಪಡೆದ ಪಿಡಿಓ ಅವರು ತ್ಯಾಜ್ಯ ಎಸೆಯಲು ಬ೦ದವರಿಗೆ ರೂ.5000 ದಂಡ ವಿಧಿಸಿ ಕಳುಹಿಸಿಕೊಟ್ಟಿರುವುದಾಗಿ ತಿಳಿದು ಬಂದಿದೆ.