ಪುತ್ತೂರು: ವಾಹನವೊಂದರಲ್ಲಿ ಕಲ್ಲಂಗಡಿ ಹಣ್ಣಿನ ತ್ಯಾಜ್ಯಗಳನ್ನು ಎಸೆಯುತ್ತಿದ್ದ ವೇಳೆ ನಗರ ಸಭೆ ಸಿಬ್ಬಂದಿಗಳು ರೆಡ್ ಹ್ಯಾಂಡ್ ಆಗಿ ಹಿಡಿದ ಘಟನೆ ಪುತ್ತೂರಿನಲ್ಲಿ ನಡೆದಿದೆ.
ವಾಹನವೊಂದರಲ್ಲಿ ಕಲ್ಲಂಗಡಿ ಹಣ್ಣಿನ ತ್ಯಾಜ್ಯಗಳನ್ನು ಎಸೆಯುತ್ತಿದ್ದ ವೇಳೆ ಗಮನಿಸಿದ ನಗರ ಸಭಾ ಸದಸ್ಯ ಪಿಜಿ ಜಗನ್ನಿವಾಸ್ ರವರು ನಗರ ಸಭೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ತಕ್ಷಣ ಆಗಮಿಸಿದ ಅಧಿಕಾರಿಗಳು ಕಸ ಬಿಸಾಡುತ್ತಿದ್ದವರಿಗೆ ದಂಡ ವಿಧಿಸಿ, ಬಿಸಾಡಿದ ಹಣ್ಣುಗಳನ್ನು ಅವರಲ್ಲೇ ಹೆಕ್ಕಿಸಿದರೆಂದು ತಿಳಿದು ಬಂದಿದೆ.
ಕಸ ಹಾಕಿದ ಲಾರಿಯನ್ನು ಹಾಸನ ಮೂಲದ ಲಾರಿ ಎನ್ನಲಾಗಿದೆ.
ಈ ಸಂದರ್ಭದಲ್ಲಿ ನಗರ ಸಭಾ ಹಿರಿಯ ಆರೋಗ್ಯಾಧಿಕಾರಿ ರಾಮಚಂದ್ರ , ಸ್ಯಾನಿಟರಿ ಸೂಪರ್ ವೈಸರ್ ಅಮಿತ್, ಸಿಬ್ಬಂದಿಗಳಾದ ರಾಧಾಕೃಷ್ಣ ಹಾಗೂ ಮತ್ತಿತರರು ಉಪಸ್ಥಿತರಿದ್ದರು.