ಮುಲ್ಕಿ: ದೈವಸ್ಥಾನದ ಲಕ್ಷಾಂತರ ಮೌಲ್ಯದ ಸೊತ್ತುಗಳನ್ನು ಕಳ್ಳತನ ಮಾಡಲಾದ ಘಟನೆ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಪಡುಪಣಂಬೂರು ಬೆಳ್ಳಾಯರು ಉತ್ರಂಜೆ ಬಳಿ ನಡೆದಿದೆ.

ದೈವಸ್ಥಾನದ ಮನೆಯ ಎದುರಿನ ಭಾಗದ ಬೀಗ ಒಡೆದು ನುಗ್ಗಿದ ಕಳ್ಳರು ದೈವದ ಸೊತ್ತುಗಳಾದ ಕಂಚಿನ ದೀಪ, ದೈವದ ಮಂಚ, ಪಂಜುರ್ಲಿ ಮೊಗ ಸೇರಿದಂತೆ ಎರಡು ಗ್ಯಾಸ್ ಸಿಲಿಂಡರ್, ಸ್ಟವ್, ಕಾಣಿಕೆ ಹಾಗೂ ದೈವದ ಪರಿಕರಗಳನ್ನು ಕಳ್ಳತನ ಮಾಡಿದ್ದಾರೆ.
ಸ್ಥಳಕ್ಕೆ ಮುಲ್ಕಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
