ರಾಮನವಮಿ ಮತ್ತು ಹನುಮಜಯಂತಿಗಳಂದು ದೇಶದಾದ್ಯಂತ ನಡೆದ ಕೋಮು ಗಲಭೆಗಳ ಕುರಿತು ನ್ಯಾಯಾಂಗ ತನಿಖೆ ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಈ ಪ್ರಕರಣಗಳನ್ನು ನ್ಯಾಯಾಂಗ ತನಿಖೆ ನಡೆಸುವಂತೆ ಅನೇಕ ಸಾರ್ವಜನಿಕ ಹಿತಾಸಕ್ತಿ ದಾವೆ(ಪಿಐಎಲ್) ಗಳು ಸಲ್ಲಿಕೆಯಾಗಿದ್ದವು.
ಆದರೆ ಇವುಗಳನ್ನು ತಳ್ಳಿ ಹಾಕಿರುವ ಸುಪ್ರೀಂ ಕೋರ್ಟ್ “ನ್ಯಾಯಾಲಯದಿಂದ ನೀಡಲಾಗದ ಪರಿಹಾರಗಳನ್ನು ಕೇಳಬೇಡಿ” ಎಂದು ಅರ್ಜಿದಾರರಿಗೆ ಹೇಳಿದೆ.
ದೇಶದಾದ್ಯಂತ ರಾಮನವಮಿ ಮತ್ತು ಹನುಮಜಯಂತಿಯಂದು ಹಲವಾರು ಕಡೆಗಳಲ್ಲಿ ಕೋಮುಸಂಘರ್ಷನಡೆದಿತ್ತು. ಅದರಲ್ಲೂ ಜಹಾಂಗೀರ್ ಪುರಿಯಲ್ಲಿ ನಡೆದ ಗಲಭೆಯು ದೇಶದಾದ್ಯಂತ ಸದ್ದು ಮಾಡಿತ್ತು.