ವಿಟ್ಲ: ರಾಷ್ಟ್ರೀಯ ಆರೋಗ್ಯ ಕೇಂದ್ರ ಯೋಜನೆಯಡಿ, ಗ್ರಾಮ ಮಟ್ಟದ ಆರೋಗ್ಯ ಸಮುದಾಯ ಕೇಂದ್ರ ಮಂಚಿ ಇದರ ಭಾಗವಾಗಿ ಕೊಳ್ನಾಡು ಗ್ರಾಮದ ಸೆರ್ಕಳದಲ್ಲಿ ಪ್ರತೀ ದಿನ ಬೆಳಿಗ್ಗೆ 9:30ಯಿಂದ ಸಂಜೆ 4:30 ತನಕ ಸಾರ್ವಜನಿಕರಿಗೆ ಸೇವೆಯಲ್ಲಿರುವ ಆರೋಗ್ಯ ಉಪ,ಕ್ಷೇಮ ಕೇಂದ್ರವು ಎ.27 ರಂದು ಉದ್ಘಾಟನೆಗೊಂಡಿತು.
ಕೊಳ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷರಾದ ನೆಬಿಸಾ ಖಾದರ್ ರವರ ಅಧ್ಯಕ್ಷತೆಯಲ್ಲಿ ರಿಬ್ಬನ್ ಕಟ್ ಮಾಡುವುದರ ಮೂಲಕ ಉದ್ಘಾಟನೆಗೊಂಡಿತು.
ಕಾರ್ಯಕ್ರಮಕ್ರಮದಲ್ಲಿ ಕೊಳ್ನಾಡು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲು ಸವಿಸ್ತಾರವಾಗಿ ಸ್ಥಳಿಯ ಜನತೆಗೆ ಹಲವಾರು ಮಾಹಿತಿಗಳನ್ನು ನೀಡಿ ಸಾರ್ವಜನಿಕರ ಸಹಕಾರವನ್ನು ಭಯಸಿದರು ಮತ್ತು ತಾತ್ಕಾಲಿಕ ಕಟ್ಟಡವನ್ನು ನೀಡಿದ ಸುರಿಬೈಲು ಶಾಲಾ ಮುಖ್ಯೋಪಾಧ್ಯಾಯ ಗೋಪಾಲ ರವರಿಗೆ ಅಭಿನಂದನೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಸ್ಥಳೀಯ ಪಂಚಾಯತ್ ಸದಸ್ಯಾರದ ಹಮೀದ್ ಸುರಿಬೈಲ್, ಜಯಂತಿ ಗೌಡ,ರಝಾಕ್ C.H ಸೆರ್ಕಳ, ಸವಿತಾ ಗೌಡ ಬರ್ಕಳ,ಮಂಚಿ ಲಯನ್ಸ್ ಕ್ಲಬ್ ಅಧ್ಯಕ್ಷ ಬಾಲಕೃಷ್ಣ ಸೆರ್ಕಳ,ಆಶಾ ಕಾರ್ಯಕರ್ತೆಯರು, ಅಂಗನವಾಡಿ ಸಹಾಯಕಿಯರು, ಸ್ಥಳಿಯ ಹಿರಿಯ ಕಿರಿಯ ನಾಗರಿಕರು ಉಪಸ್ಥಿತರಿದ್ದರು.
ಸಮುದಾಯ ಆರೋಗ್ಯ ಉಪ,ಕ್ಷೇಮ ಕೇಂದ್ರ ಸೆರ್ಕಳ ಇದರ ವೈದ್ಯಧಿಕಾರಿ ಡಾ.ಸತೀಶ್ ಆರೋಗ್ಯ ಕೇಂದ್ರವು ಕಾರ್ಯನಿರ್ವಹಿಸುವ ಬಗ್ಗೆ ಮಾಹಿತಿ ನೀಡಿದರು.