ಪುತ್ತೂರು: ಬಂಟರ ಸಂಘ ಪುತ್ತೂರು ತಾಲೂಕು ಇದರ ಆಶ್ರಯದಲ್ಲಿ ‘ಬಂಟ್ರೆ ಗೌಜಿ -2022’ ಕಾರ್ಯಕ್ರಮವೂ ಎಂ. ಸುಂದರ್ ರಾಮ್ ಶೆಟ್ಟಿ ಸ್ಮಾರಕ ಬಂಟರ ಭವನ ಕೊಂಬೆಟ್ಟುವಿನಲ್ಲಿ ಎ.30 ರಂದು ನಡೆಯಲಿದೆ.
ಸಂಜೆ 4 ಗಂಟೆಯಿಂದ ಕಾರ್ಯಕ್ರಮ ಪ್ರಾರಂಭವಾಗಲಿದ್ದು, ಆನೆ ಬಾಗಿಲು ಉದ್ಘಾಟನೆಯನ್ನು ಉದ್ಯಮಿ ಪುರಂದರ ರೈ ಮಿತ್ರಂಪಾಡಿ ರವರು ನೆರವೇರಿಸಲಿದ್ದಾರೆ. ಪುತ್ತೂರು ತಾಲೂಕು ಸಮಿತಿ ಸಹ ಸಂಚಾಲಕರಾದ ಜಯಪ್ರಕಾಶ್ ನೂಜಿಬೈಲು, ಪುತ್ತೂರು ಬಂಟರ ಸಂಘದ ಉಪಾಧ್ಯಕ್ಷರಾದ ಸುಬ್ಬಣ್ಣ ರೈ ಖಂಡಿಗ, ಪುತ್ತೂರು ಮಹಿಳಾ ಬಂಟರ ಸಂಘದ ಅಧ್ಯಕ್ಷರಾದ ಸಬಿತಾ ಭಂಡಾರಿ, ಪುತ್ತೂರು ಬಂದ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಪವನ್ ಶೆಟ್ಟಿ ಕಂಬಳದಡ್ಡ ರವರು ಉಪಸ್ಥಿತರಿರಲಿದ್ದಾರೆ.
ಸಂಜೆ 4.30 ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರಾರಂಭಗೊಳ್ಳಲಿದೆ. ಉದ್ಯಮಿ ಸಂಜೀವ ಆಳ್ವ ರವರು ದೀಪ ಪ್ರಜ್ವಲನೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ರವರು ಗೌರವ ಉಪಸ್ಥಿತಿ ವಹಿಸಲಿದ್ದಾರೆ.
ಬಂಟ ಸಾಂಸ್ಕೃತಿಕ ವೈಭವ ಚಾಲನೆಯನ್ನು ತಾಲೂಕು ಸಮಿತಿ ಸಂಚಾಲಕರಾದ ದಯಾನಂದ ಮನವಳಿಕೆಗುತ್ತು ರವರು ನೀಡಲಿದ್ದಾರೆ. ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್, ಬಂಟರ ಸಂಘದ ಉಪಾಧ್ಯಕ್ಷರಾದ ಜಗಜೀವನ್ ದಾಸ್ ರೈ ಚಿಲ್ಮೆತ್ತಾರು, ಬಂಟರ ಸಂಘದ ಉಪಾಧ್ಯಕ್ಷರಾದ ರೋಶನ್ ರೈ ಬನ್ನೂರು ಗೌರವ ಉಪಸ್ಥಿತಿ ವಹಿಸಲಿದ್ದಾರೆ. ರವಿ ಶೆಟ್ಟಿ ಮೂಡಂಬೈಲು, ನೇಸರ ರವರು ವಿದೇಶದಿಂದ ಶುಭ ಸಂಶನೆ ನೀಡಲಿದ್ದಾರೆ.
ಪ್ರೊ ಕಬಡ್ಡಿ ಸೀಸನ್ ಎಂಟರ ರನ್ನರ್ಸ್ ಪಟ್ನಾ ಪೈರೇಟ್ಸ್ ತಂಡದ ಕ್ಯಾಪ್ಟನ್ ಪ್ರಶಾಂತ್ ಕುಮಾರ್ ರೈ ಕೈಕಾರ ಮತ್ತು, ಕುಂದಾಪುರದಲ್ಲಿ ಉಪವಲಯ ಅರಣ್ಯಧಿಕಾರಿಯಾಗಿರುವ, ಸಹಾಯಕ ಅರಣ್ಯಾಧಿಕಾರಿ ನೇಮಕಾತಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 2ನೇ ಸ್ಥಾನ ಪಡೆದಿರುವ ಹಸ್ತಾ ಶೆಟ್ಟಿ ಮುಡಾಲ ರವರಿಗೆ ವಿಶೇಷ ಗೌರವಾರ್ಪಣೆ ಕಾರ್ಯಕ್ರಮ ನಡೆಯಲಿದೆ.
ಸಂಜೆ 6 ರಿಂದ ಸಭಾ ಕಾರ್ಯಕ್ರಮ ನಡೆಯಲಿದೆ. ಸಭಾಧ್ಯಕ್ಷತೆಯನ್ನು ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷರಾದ ಶಶಿಕುಮಾರ್ ರೈ ಬಾಲ್ಯೊಟ್ಟು ರವರು ವಹಿಸಲಿದ್ದಾರೆ. ದಿಕ್ಸೂಚಿ ಭಾಷಣವನ್ನು ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಆಡಳಿತ ನಿರ್ದೇಶಕರಾದ ಎಂ. ಮೋಹನ್ ಆಳ್ವ ರವರು ಮಾಡಲಿದ್ದಾರೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಮಂಗಳೂರು ಮಾತೃ ಬಂಟರ ಸಂಘದ ಅಧ್ಯಕ್ಷರಾದ ಅಜಿತ್ ಕುಮಾರ್ ರೈ ಮಾಲಾಡಿ ರವರು ನೆರವೇರಿಸಲಿದ್ದಾರೆ. ಸಂಸದರಾದ ನಳಿನ್ ಕುಮಾರ್ ಕಟೀಲ್ ರವರು ಸಾಧಕರಿಗೆ ಸನ್ಮಾನ ಮಾಡಲಿದ್ದಾರೆ. ಎಜೆ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕರಾದ ಎಜೆ ಶೆಟ್ಟಿ ರವರು ದಾನಿಗಳಿಗೆ ಸನ್ಮಾನ ಮಾಡಲಿದ್ದಾರೆ.
ಜಾಗತಿಕ ಬಂಟರ ಸಂಘದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ರವರು ಶಾಸ್ತ್ರ ಯೋಜನೆಯ ಚಾಲನೆಯನ್ನು ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಉದ್ಯಮಿ, ಪಟ್ಲ ಫೌಂಡೇಶನ್ ಗೌರವಾಧ್ಯಕ್ಷರಾದ ಸದಾಶಿವ ಶೆಟ್ಟಿ ಹೇರಂಬ, ಉದ್ಯಮಿ ಶಶಿಧರ ಬಿ. ಶೆಟ್ಟಿ, ಕರ್ನಲ್ ಜಗಜೀವನ್ ದಾಸ್ ಭಂಡಾರಿ ಅಗರಿ, ಉದ್ಯಮಿ ವಿವೇಕ್ ಶೆಟ್ಟಿ ನಗ್ರಿಗುತ್ತು, ಜಯರಾಮ ರೈ ಮಿತ್ರಂಪಾಡಿ, ಮಾತೃ ಬಂಟರ ಸಂಘದ ಉಪಾಧ್ಯಕ್ಷರಾದ ಹೇಮನಾಥ್ ಶೆಟ್ಟಿ ಕಾವು, ಪುತ್ತೂರು ಬಂಟರ ಸಂಘದ ಮಾಜಿ ಅಧ್ಯಕ್ಷರಾದ ಸೀತಾರಾಮ ರೈ ಸವಣೂರು, ಫಾದರ್ ಮುಲ್ಲಾರ್ ಆಸ್ಪತ್ರೆಯ ಚೀಪ್ ಮೆಡಿಕಲ್ ಆಫೀಸರ್ ಡಾ. ಸಂಜೀವ ಶೆಟ್ಟಿ ಬೂಡಿಯಾರು, ಯಮುನಾ ಗ್ರೂಪ್ಸ್ ಮಂಗಳೂರಿನ ಪುರುಷೋತ್ತಮ ಶೆಟ್ಟಿ ನುಳಿಯಾಲು, ಪುತ್ತೂರು ಬಂಟರ ಸಂಘದ ನಿಕಟಪೂರ್ವ ಅಧ್ಯಕ್ಷರಾದ ರಾಧಾಕೃಷ್ಣ ರೈ ಬೂಡಿಯಾರು ಉಪಸ್ಥಿತರಿರಲಿದ್ದಾರೆ.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಭವಾನಿ ಗ್ರೂಪ್ ನ ಆಡಳಿತ ನಿರ್ದೇಶಕರಾದ ಕುಸುಮಾಧರ ಶೆಟ್ಟಿ, ಸಮಾಜಸೇವಕರಾದ ಚಿಕ್ಕಪ್ಪ ನಾಯಕ್ ಅರಿಯಡ್ಕ, ರಾಜ್ಯೋತ್ಸವ ಕೃಷಿ ಪ್ರಶಸ್ತಿ ಪುರಸ್ಕೃತರಾದ ಕಡಮಜಲು ಸುಭಾಷ್ ರೈ ರವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.
ಪ್ರಗತಿಪರ ಕೃಷಿಕರಾದ ರೈ ಎಸ್ಟೇಟ್ ಕೋಡಿಂಬಾಡಿಯ ಗಿರಿಜಾ ಎಸ್. ರೈ, ಕಸ್ತೂರಿಕಲಾ ಎಸ್. ರೈ ಸವಣೂರು ರವರಿಗೆ ಬಂಟ ಸಿರಿ ಪ್ರಶಸ್ತಿ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ರಾತ್ರಿ 9 ಗಂಟೆಗೆ ಲಯನ್ ಡಿ. ಕಿಶೋರ್ ಶೆಟ್ಟಿ ರವರ ‘ಶ್ರೀ ಲಲಿತ’ ತಂಡದಿಂದ ‘ಕಟೀಲ್ದಪ್ಪೆ ಉಳ್ಳಾಲ್ತಿ’ ಪೌರಾಣಿಕ ನಾಟಕ ನಡೆಯಲಿದೆ ಎಂದು ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷರಾದ ಶಶಿಕುಮಾರ್ ರೈ ಬಾಲ್ಯೊಟ್ಟು ರವರು ಪ್ರಕಟಣೆಯಲ್ಲಿ ತಿಳಿಸಿದರು.