ಸುಳ್ಯ: ಅಪ್ರಾಪ್ತ ಬಾಲಕನೋರ್ವ ಸ್ನಾನ ಮಾಡಲೆಂದು ಹೋದ ಸಂದರ್ಭ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಅರಂತೋಡು ಗ್ರಾಮದ ಕುಕ್ಕುಂಬಳ ಹೊಳೆಯಲ್ಲಿ ನಡೆದಿದೆ.
ಮೃತನನ್ನು ಮಂಗಳೂರಿನ ಮನ್ವಿತ್ ರಾಜ್ (12) ಎನ್ನಲಾಗಿದೆ.
ಅರಂತೋಡಿನ ಬಾಲಕೃಷ್ಣ ಶೆಟ್ಟಿಯವರ ಪುತ್ರಿಯನ್ನು ಮಂಗಳೂರಿಗೆ ವಿವಾಹ ಮಾಡಿಕೊಡಲಾಗಿದ್ದು, ಅವರ ಮಗ ಮನ್ವಿತ್ ಅಜ್ಜನ ಮನೆಗೆ ಬಂದ ಸಂದರ್ಭ ಕುಕ್ಕುಂಬಳ ಸಮೀಪ ಸ್ನಾನ ಮಾಡಲೆಂದು ನೀರಿಗಿಳಿದು ಮೃತಪಟ್ಟರೆಂದು ತಿಳಿದು ಬಂದಿದೆ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.