ಪುತ್ತೂರು: ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್ ಹಾಗೂ ನಗರಸಭೆಗಳಲ್ಲಿ ಕಾಂಗ್ರೆಸ್ ಪಕ್ಷದಿಂದ ಚುನಾಯಿತರಾದ ಮತ್ತು ಸ್ಪರ್ಧಿಸಿದ ಅಭ್ಯರ್ಥಿಗಳ ಕ್ಷೇತ್ರವಾರು ಸಭೆ ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆಯಿತು.
ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಮಾತನಾಡಿ, ನಾವು ಸಾಮೂಹಿಕ ನಾಯಕತ್ವದಲ್ಲಿ ಕಾರ್ಯಕರ್ತರ ಸ್ಪಂದನೆಯೊಂದಿಗೆ ಪಕ್ಷ ಸಂಘಟನೆ ಮಾಡುವ ಅಗತ್ಯವಿದೆ ಎಂದು ಹೇಳಿದರು. ನನಗೆ ಸಿಗುವ ಅನುದಾನದಲ್ಲಿ ಪಂಚಾಯತ್ ಮಟ್ಟದಲ್ಲಿ ಆಗುವ ಅಭಿವೃದ್ಧಿಗಳಿಗೆ ವಿನಿಯೋಗಿಸಲು ಸಿದ್ಧನಿದ್ದೇನೆ. ಈ ಬಗ್ಗೆ ಪಂಚಾಯತ್ ಮಟ್ಟದಲ್ಲಿ ಕಾರ್ಯಕರ್ತರು ಚರ್ಚಿಸಿ ಬ್ಲಾಕ್ ಅಧ್ಯಕ್ಷರ ಗಮನಕ್ಕೆ ತಂದು ಆ ಮೂಲಕ ಕಾರ್ಯಪ್ರವೃತ್ತರಾಗಲಿದ್ದೇವೆ ಎಂದು ಹೇಳಿದರು. ನಾವು ಪಂಚಾಯತ್ ಮಟ್ಟಕ್ಕೆ ನೀಡುವ ಅನುದಾನವು ಮತವಾಗಿ ಪರಿವರ್ತನೆಗೊಳ್ಳಬೇಕಿದೆ ಕಾರ್ಯಕರ್ತರು ಮುಂದಿನ ಚುನಾವಣೆಗೆ ಈಗಿನಿಂದಲೇ ಸಜ್ಜಾಗಬೇಕು ಎಂದು ಹೇಳಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಕೆ.ಹರೀಶ್ ಕುಮಾರ್ ಮಾತನಾಡಿ, ಸರಕಾರದ ವೈಫಲ್ಯಗಳನ್ನು ಜನರೆಡೆಗೆ ಕೊಂಡೊಯ್ಯಲು ನಾವು ಸಿದ್ಧರಾಗಬೇಕು ಎಂದು ಹೇಳಿದರು. ಕಾರ್ಯಕರ್ತರ ಪರವಾಗಿ
ಆರ್ಯಾಪು ಪಂಚಾಯತ್ ಸದಸ್ಯರಾದ ಬೂಡಿಯಾರ್ ಪುರುಷೋತ್ತಮ್ ರೈ, ಮಹಾಲಿಂಗ ನಾಯ್ಕ, ಮುಖೇಶ್ ಶೆಮ್ಮಿಂಜೆ ಅನಿಸಿಕೆ ವ್ಯಕ್ತಪಡಿಸಿದರು. ವೇದಿಕೆಯಲ್ಲಿ ಮಾಜಿ ಶಾಸಕಿ ಶಕುಂತಲಾ ಟಿ.ಶೆಟ್ಟಿ, ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಅಧ್ಯಕ್ಷ ಸುಭಾಸ್‌ಚಂದ್ರ ಶೆಟ್ಟಿ ಕೊಲ್ನಾಡ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಎಂ.ಎಸ್ ಮಹಮ್ಮದ್, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜಾರಾಮ್ ಕೆ.ಬಿ., ಪುತ್ತೂರು ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ವಿ.ಹೆಚ್.ಎ. ಶಕೂರ್ ಹಾಜಿ, ಜಿಲ್ಲಾ ಕಾಂಗ್ರೆಸ್ ವಕ್ತಾರ ಮಹಮ್ಮದ್ ಬಡಗನ್ನೂರು, ಜಿಲ್ಲಾ ಸೇವಾದಳದ ಅಧ್ಯಕ್ಷ ಜೋಕಿಂ ಡಿ’ಸೋಜ, ಪಂಚಾಯತ್ ರಾಜ್ ಸಂಘಟನೆಯ ಪುತ್ತೂರು ಬ್ಲಾಕ್ ಅಧ್ಯಕ್ಷ ಸಂತೋಷ್ ಭಂಡಾರಿ ಜಿಲ್ಮೆತ್ತಾರ್ ಉಪಸ್ಥಿತರಿದ್ದರು.
ನಗರಸಭಾ ಸದಸ್ಯರಾದ ರಿಯಾಜ್ ಪರ್ಲಡ್ಕ, ರೋಬಿನ್ ತಾವ್ರೊ, ಯೂಸುಫ್ ಕೂರ್ನಡ್ಕ, ನಗರ ಸಭೆಗೆ ಸ್ಪರ್ಧಿಸಿದ ಅಭ್ಯರ್ಥಿಗಳಾದ ಸುಧಾ ಕುಂಜತ್ತಾಯ, ಯೂಸುಫ್ ತಾರಿಗುಡ್ಡೆ, ಶಿರಾಜ್ ಸಾಮೆತ್ತಡ್ಕ, ಶಾರದಾ ಅರಸ್, ಕೇಶವ ಪಡೀಲ್, ದಿನೇಶ್ ಕೆ ಶೇವಿರೆ, ನೆಬಿಸ ಬಪ್ಪಳಿಗೆ ಒಳಮೊಗರು ಪಂಚಾಯತ್ ಉಪಾಧ್ಯಕ್ಷೆ ಶಾರದಾ ಪರ್ಪುಂಜ, ಸದಸ್ಯರಾದ ಅಶ್ರಫ್ ಪರ್ಪುಂಜ, ಬಿ.ಸಿ ಚಿತ್ರ, ವಿನೋದ್ ಶೆಟ್ಟಿ, ಶೀನಪ್ಪ ನಾಯ್ಕ, ಪಾಣಾಜೆ ಪಂಚಾಯತ್
ಸದಸ್ಯೆ ವಿಮಲಾ ನಾಯ್ಕ, ನೇಮಾಕ್ಷ ಸುವರ್ಣ, ಯಾಕೂಬು ಕುರಿಯ, ನಗರ ಕಾಂಗ್ರೆಸ್ ಪದಾಧಿಕಾರಿಗಳಾದ ಸೂರಜ್ ಶೆಟ್ಟಿ ಸಾಮೆತಡ್ಕ, ವಿಕ್ಟರ್ ಪಾಯ್ಸ್, ರಶೀದ್ ಮುರ, ನಾರಾಯಣ ಮಣಿಯಾಣಿ, ನಾರಾಯಣ ಕುಡ್ವ, ಹಮೀದ್ ಮೊಟ್ಟೆತಡ್ಕ ಸುರೇಶ್ ಪೂಜಾರಿ ಮೊಟ್ಟೆತಡ್ಕ, ಮಹಮ್ಮದ್ ಅಲಿ ಪರ್ಲಡ್ಕ.
ವಾಲ್ಟರ್ ಸಿಕ್ವೆರಾ, ಸೈಮನ್ ಗೊನ್ಸಾಲ್ವೇಸ್, ರಝಾಕ್ ಆರ್ ಪಿ ನಗರ ಸಭಾ ಮಾಜಿ ಅಧ್ಯಕ್ಷೆ ಜಯಂತಿ ಬಲ್ನಾಡ್, ನಗರ ಸಭಾ ಮಾಜಿ ಸದಸ್ಯರಾದ ಉಷಾ ಧನಂಜಯ್, ಬ್ಲಾಕ್ ಪದಾಧಿಕಾರಿಗಳಾದ, ಅಮಲ ರಾಮಚಂದ್ರ, ಅಲಿಕುಂಹಿ ಕೊರಿಂಗಿಲ, ಶಶಿಕಿರಣ್ ರೈ, ರಾಮಚಂದ್ರ ಸೊರಕೆ, ಸಿರಿಲ್ ರೋಡ್ರಿಗಸ್, ರೋಷನ್ ರೈ ಬನ್ನೂರು, ಭಾಸ್ಕರ್ ಕರ್ಕೆರ, ಎಸ್.ಟಿ ಘಟಕದ ಅಧ್ಯಕ್ಷ ಮಹಾಲಿಂಗ ನಾಯ್ಕ, ಹಿಂದುಳಿದ ವರ್ಗದ ಅಧ್ಯಕ್ಷ ಹರೀಶ್ ಕೋಟ್ಯಾನ್, ಮಹಿಳಾ ಕಾಂಗ್ರೆಸ್ ಪದಾಧಿಕಾರಿ ಸೀತಾ ಭಟ್, ವಲಯ ಕಾಂಗ್ರೆಸ್ ಅಧ್ಯಕ್ಷರುಗಳಾದ ಅಶೋಕ ಪೂಜಾರಿ ಬೊಲ್ಲಾಡಿ, ಪ್ರಜ್ವಲ್ ರೈ ತೊಟ್ಲ, ಸತೀಶ್ ರೈ ನೆಲ್ಲಿಕಟ್ಟೆ, ಸನತ್ ರೈ ಕುರಿಯ, ಪಕ್ಷದ ಪ್ರಮುಖರಾದ ಸಿದ್ದಿಕ್ ಸುಲ್ತಾನ್, ಕೃಷ್ಣಪ್ರಸಾದ್ ಆಳ್ವ, ರಫೀಕ್ ಮೊಟ್ಟೆತಡ್ಕ, ಪವಿತ್ರ ಬಾಬು, ಮೊಯಿದು ಕುಂಞ ಕುಂಜೂರು, ಬಾಬು ಮರಿಕೆ, ತಾರಾನಾಥ್, ವಿಶ್ವಜಿತ್ ಅಮ್ಮುಂಜೆ ಮೊದಲಾದವರು ಉಪಸ್ಥಿತರಿದ್ದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ ವಿಶ್ವನಾಥ ರೈ ಸ್ವಾಗತಿಸಿ, ನಗರ ಕಾಂಗ್ರೆಸ್ ಅಧ್ಯಕ್ಷ ಎಚ್.ಮಹಮ್ಮದ್ ಅಲಿ ವಂದಿಸಿದರು.