ನವದೆಹಲಿ: ಕೊರೊನಾ ನಂತರ ವಿದೇಶಿ ಪ್ರವಾಸಕ್ಕೆ ಸುದೀರ್ಘ ವಿರಾಮ ನೀಡಿದ್ದ ಪ್ರಧಾನಿ ಮೋದಿ, ಇದೀಗ ಈ ವರ್ಷದ ಮೊದಲ ಟ್ರಿಪ್‌ಗೆ ರೆಡಿ ಆಗಿದ್ದಾರೆ. 3 ದಿನಗಳ ಕಾಲ ಯುರೋಪ್ ರಾಷ್ಟ್ರಗಳ ಪ್ರವಾಸಕ್ಕೆ ಸಜ್ಜಾಗಿದ್ದಾರೆ. ಮೂರು ದಿನಗಳಲ್ಲಿ ಮೂರು ದೇಶಕ್ಕೆ ವಿಸಿಟ್ ಕೊಡಲಿರೋ ಮೋದಿ.. 25 ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ.
3 ದಿನಗಳ ಕಾಲ ಯುರೋಪ್ ಪ್ರವಾಸ ಕೈಗೊಂಡಿರೋ ಪ್ರಧಾನಿ ಮೋದಿ, ಜರ್ಮನಿ, ಡೆನ್ಮಾರ್ಕ್, ಫ್ರಾನ್ಸ್ ದೇಶಕ್ಕೆ ಭೇಟಿ ನೀಡಲಿದ್ದಾರೆ. ವಿಮಾನದಲ್ಲಿ 2 ರಾತ್ರಿ ಹಾಗೂ ಫ್ರಾನ್ಸ್, ಜರ್ಮನಿಯಲ್ಲಿ ತಲಾ 1 ರಾತ್ರಿ ಕಳೆಯಲಿದ್ದಾರೆ. 65 ಗಂಟೆಗಳ ಪ್ರವಾಸದಲ್ಲಿ 25 ಕಾರ್ಯಕ್ರಮಗಳಲ್ಲಿ ಭಾಗಿ ಆಗಲಿದ್ದು, 7 ದೇಶಗಳ 8 ಗಣ್ಯರ ಜೊತೆ ಮಾತುಕತೆ ನಡೆಸಲಿದ್ದಾರೆ. ಜಗತ್ತಿನ ಶ್ರೇಷ್ಠ 50 ಉದ್ಯಮಿಗಳೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ. ಅಲ್ಲದೆ, ಭಾರತೀಯ ಸಮುದಾಯದ ಗಣ್ಯರೊಂದಿಗೆ ಚರ್ಚೆ ಹಾಗೂ ಜರ್ಮನಿಯಲ್ಲಿ ಭಾರತೀಯ ಸಮುದಾಯ ಉದ್ದೇಶಿಸಿ ಭಾಷಣ ಹಾಗೂ ಸಂವಾದ ನಡೆಸೋ ಪ್ಲಾನ್ ರೆಡಿ ಆಗಿದೆ.
ಇನ್ನು, ಪ್ರಧಾನಿ ಮೋದಿ ಯುರೋಪ್ ರಾಷ್ಟ್ರಗಳ ಪ್ರವಾಸದ ಹಿಂದೆ ಹಲವು ಅಂಶಗಳಿವೆ. ಮಾತುಕತೆಯ ಮಂತ್ರ.. ಪಾಲುದಾರಿಕೆ ವಿಸ್ತರಣೆಯ ಜಪ ಈ ವೇಳೆ ನಡೆಯಲಿದೆ.
ಭೇಟಿ ಉದ್ದೇಶ ಏನು..?
ಯುರೋಪ್‌ನೊಂದಿಗೆ ಭಾರತದ ಪಾಲುದಾರಿಕೆ ವಿಸ್ತರಣೆ ಮೋದಿ ಭೇಟಿಯ ಉದ್ದೇಶ. ನವೀಕರಿಸಬಹುದಾದ ವಸ್ತುಗಳು, ಹೈಟೆಕ್ ಮೊಬಿಲಿಟಿ, ಇಂಡೋ- ಪೆಸಿಫಿಕ್ ಅಜೆಂಡಾ ಬಗ್ಗೆ ಮಾತುಕತೆ ನಡೆಸಲಿದ್ದಾರೆ. ಬರ್ಲಿನ್‌ನಲ್ಲಿ ಜರ್ಮನ್ ಚಾನ್ಸೆಲರ್, ಕೋಪನ್‌ಹೇಗನ್‌ನಲ್ಲಿ ಡೆನ್ಮಾರ್ಕ್ ಪ್ರಧಾನಿ, ಪ್ಯಾರಿಸ್‌ನಲ್ಲಿ ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್ ಜೊತೆ ಸಮಾಲೋಚನೆ ನಡೆಸಲಿದ್ದಾರೆ. ಬರ್ಲಿನ್‌ನಲ್ಲಿ ಇಂಡೋ – ಜರ್ಮನ್ ಸಮ್ಮೇಳನ ಹಾಗೂ ಕೋಪನ್‌ಹೇಗನ್‌ನಲ್ಲಿ ಭಾರತ- ನೋರ್ಡಿಕ್ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ. ಐಸ್‌ಲ್ಯಾಂಡ್, ನಾರ್ವೆ, ಸ್ವೀಡನ್, ಫಿನ್‌ಲ್ಯಾಂಡ್ ಜೊತೆ ಪ್ರಧಾನಿ ಮೋದಿ ಸಂವಾದ ನಡೆಸಲಿದ್ದಾರೆ. ಜೊತೆಗೆ ಭಾರತ- ಡೆನ್ಮಾರ್ಕ್ ಉದ್ಯಮ ವೇದಿಕೆಯಲ್ಲೂ ಪಾಲ್ಗೊಳ್ಳಲಿದ್ದಾರೆ. ಫಾನ್ಸ್, ಜರ್ಮನ್, ಡೆನ್ಮಾರ್ಕ್ ಜೊತೆ ರಷ್ಯಾ- ಉಕ್ರೇನ್ ವಾರ್ ಬಗ್ಗೆ ಭಾರತದ ನಿಲುವೇನು ಅಂತ ಮೋದಿ ತಿಳಿಸಲಿದ್ದಾರೆ.