ಪುತ್ತೂರು : ಜೆಸಿಐ ಪುತ್ತೂರು ಪ್ರಾಂತ್ಯ ಎಫ್, ವಲಯ ಎಕ್ಸ್ ವಿ ವತಿಯಿಂದ ರೈತರಿಗಾಗಿ “Farmers Health Desk” ರೈತರಿಗೆ ಸಹಾಯ ಹಸ್ತ ಎಂಬ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಈ ಕಾರ್ಯಕ್ರಮವು ಶ್ರೀ ಮಂಜುನಾಥ ಭವನ ದೇವಸ್ಯದಲ್ಲಿ ನಡೆಯಿತು. ಕೇಂದ್ರ ಮತ್ತು ರಾಜ್ಯ ಸರಕಾರದಿಂದ ರೈತರಿಗೆ ಸಿಗುವ ಅನುದಾನ ಮತ್ತು ಸವಲತ್ತುಗಳ ಬಗ್ಗೆ ಮಾಹಿತಿಯನ್ನು ಈ ಕಾರ್ಯಗಾರದಲ್ಲಿ ನೀಡಲಾಯಿತು.
ಕಾರ್ಯಕ್ರಮ ಉದ್ಘಾಟನೆಯನ್ನು ಜೆ.ಮಹಾಬಲ ರೈ ಅಧ್ಯಕ್ಷರು ಜನಜಾಗೃತಿ ವೇದಿಕೆ, ಪುತ್ತೂರು ತಾಲೂಕು ಇವರು ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ : ಆನಂದ ಕೆ, ಯೋಜನಾಧಿಕಾರಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪುತ್ತೂರು ತಾಲೂಕು, ಉಮೇಶ್ ಬಿ, ಕೃಷಿ ಅಧಿಕಾರಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಪುತ್ತೂರು, ಸಭಾಧ್ಯಕ್ಷತೆಯನ್ನು ಜೆಸಿಐ ಪುತ್ತೂರಿನ ಅಧ್ಯಕ್ಷರಾದ ಜೆಸಿ ಸ್ವಾತಿ ಜಗನ್ನಾಥ್ ರೈ ಇವರು ವಹಿಸಿದ್ದು, ಸಂಪನ್ಮೂಲ ವ್ಯಕ್ತಿಯಾಗಿ ಡಾ. ನಾಗರಾಜು ಹಿರಿಯ ವಿಜ್ಞಾನಿಗಳು ಸಿಪಿಸಿಆರ್.ಐ ವಿಟ್ಲ ಹಾಗೂ ಕಾರ್ಯಕ್ರಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಒಕ್ಕೂಟ ಅಧ್ಯಕ್ಷರು ರಾಮನಾಯ್ಕ ಮತ್ತು ಆರ್ಯಾಪು ಗ್ರಾಮ ಪಂಚಾಯತ್ ಅಧ್ಯಕ್ಷೆ ಸರಸ್ವತಿ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇಗ್ನೇಷಿಯಸ್ ಡಿ ಸೋಜಾ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವಾ ಪ್ರತಿನಿಧಿ ಸಹಕರಿಸಿದರು. ಜೆಸಿಐ ಪುತ್ತೂರಿನ ಕಾರ್ಯದರ್ಶಿ ತಿಲಕ್ ರಾಜ್ ಸಿ, ಜೆಸಿಆರ್ ಟಿ ಶಿಲ್ಪಾ, ಜೆಸಿ ಪುರುಷೋತ್ತಮ್ ಶೆಟ್ಟಿ ಕಾರ್ಯಕ್ರಮವನ್ನು ಸಂಯೋಜನೆ ಮಾಡಿದರು.