ಕಡಬ: ಯಾರೋ ಅಪರಿಚಿತರು ರೆಂಜಲಾಡಿ ಗ್ರಾಮದ ಪೇರಡ್ಕ ಎಂಬಲ್ಲಿರುವ ಚರ್ಚ್ ಕಟ್ಟಡದ ಬಾಗಿಲು ಒಡೆದು ಅಕ್ರಮ ಪ್ರವೇಶ ಮಾಡಿ ಕಟ್ಟಡದ ಮೇಲ್ಭಾಗದಲ್ಲಿದ್ದ ಕ್ರೈಸ್ತ ಶಿಲುಬೆಯನ್ನು ನಾಶಮಾಡಿ ಪ್ರಾರ್ಥನ ಮಂದಿರದ ಒಳಗಡೆ ಹಿಂದೂಗಳ ದೇವರಾದ ಹನುಮಂತನ ಫೋಟೋ ಇಟ್ಟು ಚರ್ಚ್ ನಲ್ಲಿದ್ದ ಕೆಲ ಸಾಮಾಗ್ರಿಗಳನ್ನು ನಾಶ ಮಾಡಿರುವುದಾಗಿ ಆರೋಪಿಸಿ ಚರ್ಚ್ ಫಾ. ಜೋಸ್ ವರ್ಗಿಸ್ ಬಿನ್ ವರ್ಗಿಸ್. ಇಮ್ಯಾನುವೆಲ್ ಅಸೆಂಬ್ಲಿ ಆಫ್ ಗಾಡ್ ರವರು ಕಡಬ ಠಾಣೆಗೆ ದೂರು ನೀಡಿದ್ದಾರೆ.

ಯಾರೋ ಅಪರಿಚಿತರು ರೆಂಜಿಲಾಡಿ ಗ್ರಾಮದ ಪೇರಡ್ಕ ಎಂಬಲ್ಲಿರುವ ಚರ್ಚ್ ಕಟ್ಟಡದ ಬಾಗಿಲನ್ನು ಒಡೆದು ಅಕ್ರಮ ಪ್ರವೇಶ ಮಾಡಿ ಕಟ್ಟಡದ ಮೇಲ್ಬಾಗದಲ್ಲಿದ್ದ ಕ್ರೈಸ್ತ ಶಿಲುಬೆಯನ್ನು ಉದ್ದೇಶಪೂರ್ವಕವಾಗಿ ನಾಶ ಮಾಡಿ ಹಿಂದೂಗಳ ದ್ವಜವನ್ನು ಅಳವಡಿಸಿರುವುದು ಅಲ್ಲದೇ ಕಟ್ಟಡದ ಒಳ ಬಾಗದಲ್ಲಿದ್ದ ಪ್ರಾರ್ಥನ ಮಂದಿರದಲ್ಲಿ ಹಿಂದುಗಳ ದೇವರಾದ ಹನುಮಂತನ ಫೋಟೋವನ್ನು ಇರಿಸಿರುವುದಾಗಿರುತ್ತದೆ, ಹಾಗೂ ಚರ್ಚನ ಒಳಬಾಗದಲ್ಲಿ ವಿದ್ಯುತ್ ಸಂಪರ್ಕದ ಉದ್ದೇಶಕ್ಕೆ ಅಳವಡಿಸಿದ ಮಿಟರ್ನ್ನು ತೆಗೆದುಕೊಂಡು ಹೋಗಿರುವುದಲ್ಲದೇ ಚರ್ಚ್ ಸಂಬಂದಪಟ್ಟ ದಾಖಲೆಗಳನ್ನು ಸಂಗ್ರಹಣೆ ಮಾಡಿಟ್ಟಿದ್ದ ಗೋಡ್ರೇಜ್ /ಕಪಾಟುವನ್ನು ಹೊಡೆದು ನಾಶ ಮಾಡಿರುತ್ತಾರೆ ಅಲ್ಲದೇ ಸದ್ರಿ ಚರ್ಚ್ ನಲ್ಲಿ ಬೆಳಕಿನ ಉದ್ದೇಶಕ್ಕಾಗಿ ಇರಿಸಿಕೊಂಡಿದ್ದ ವಿದ್ಯುತ್ ಬಲ್ಬಗಳನ್ನು ತೆಗೆದುಕೊಂಡು ಹೋಗಿರುವುದಲ್ಲದೇ ಚರ್ಚ್ ನಲ್ಲಿ ನೀರಾವರಿ ಉದ್ದೇಶಕ್ಕಾಗಿ ತೆರೆದ ಬಾವಿಗೆ ಅಳವಡಿಸಿಕೊಂಡಿದ್ದ 14,000/-ಮೌಲ್ಯದ ನೀರಾವರಿ ಪಂಪ್ ಮತ್ತು ಪೈಪ್ಗಳನ್ನು ಕಿಡಿಗೆಡಿಗಳು ಕಿತ್ತುಕೊಂಡು ಹೋಗಿರುವುದಾಗಿದೆ, ಹಾಗೂ ಮೇ.4 ರಂದು ರಾತ್ರಿ ಕಟ್ಟಡಕ್ಕೆ ಅಳವಡಿಸಿದ್ದ ವಿದ್ಯುತ್ ಕಂಬದಿಂದ ಸರ್ವಿಸ್ ವಯರ್ಗಳನ್ನು ಕಟ್ ಮಾಡಿ ಮಿಟರ್ ಬಾಕ್ಸ್ ಕೂಡ ತೆಗೆದುಕೊಂಡು ಹೋಗಿರುತ್ತಾರೆ.
ಚರ್ಚ್ ಕಟ್ಟಡಕ್ಕೆ ಕಳೆದ 30 ವರ್ಷಗಳ ಹಿಂದಿನಿಂದಲೂ ಕಟ್ಟಡದ ತೆರಿಗೆ ಪಾವತಿಸಿಕೊಂಡು ಬರುತಿದ್ದು ಕಟ್ಟಡ ನಂಬ್ರ:1/107 ಇಮ್ಯಾನುವೆಲ್ ಅಸೆಂಬ್ಲಿ ಆಫ್ ಗಾಡ್ ಪೇರಡ್ಕ ಕ್ರೈಸ್ತ ಪ್ರಾರ್ಥನ ಮಂದಿರವಾಗಿರುತ್ತದೆ. ಆದ್ದರಿಂದ ಕ್ರೈಸ್ತ ಪ್ರಾರ್ಥನ ಮಂದಿರಕ್ಕೆ ಅಕ್ರಮ ಪ್ರವೇಶ ಮಾಡಿ ಧಾರ್ಮಿಕ ಕಲಹ ಎಬ್ಬಿಸಿರುವ ಕಿಡಿಗೇಡಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಕಡಬ ಠಾಣೆಯಲ್ಲಿ ಅ ಕ್ರ ನಂಬ್ರ: 43/2022 ಕಲಂ : 448.295(A).427.379. ಐಪಿಸಿಯಂತೆ ಪ್ರಕರಣ ದಾಖಲಾಗಿದೆ.