ನವದೆಹಲಿ: ಫಾಸ್ಟ್ ಟ್ಯಾಗ್ನ ದಿನದ ಸರಾಸರಿ ಸಂಗ್ರಹ ನೂರು ಕೋಟಿ ದಾಟಿದೆ ಅಂತ ಕೇಂದ್ರ ಹೆದ್ದಾರಿ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ. ಈ ಕುರಿತು ರಾಜ್ಯಸಭೆಯಲ್ಲಿ ಲಿಖಿತ ರೂಪದಲ್ಲಿ ಉತ್ತರ ನೀಡಿರುವ ಗಡ್ಕರಿ, ಮಾರ್ಚ್ 16 ರಿಂದ 3 ಕೋಟಿಗಿಂತ ಹೆಚ್ಚು ಫಾಸ್ಟ್‌ಟ್ಯಾಗ್‌ಗಳನ್ನು ನೀಡಲಾಗಿದೆ. ಫಾಸ್ಟ್‌ಟ್ಯಾಗ್ ಮೂಲಕ ದೈನಂದಿನ ಸರಾಸರಿ ಶುಲ್ಕ ಸಂಗ್ರಹವು ಮಾರ್ಚ್ 1 ರಿಂದ 16 ರವರೆಗೆ 100 ಕೋಟಿ ರೂ.ಗಳಿಗಿಂತ ಹೆಚ್ಚಾಗಿದೆ ಅಂತ ರಾಜ್ಯಸಭೆಗೆ ತಿಳಿಸಿದ್ದಾರೆ.
ಫೆಬ್ರವರಿ 15 ರಿಂದ ಫಾಸ್ಟ್‌ಟ್ಯಾಗ್ ಕಡ್ಡಾಯ ಮಾಡಲಾಗಿದೆ. ಇದಕ್ಕೂ ಮುನ್ನ ಪ್ರತಿದಿನ 85 ಕೋಟಿ ರೂಪಾಯಿ ಗರಿಷ್ಠ ಸಂಗ್ರವಾಗಿತ್ತು. ಫಾಸ್ಟ್ ಟ್ಯಾಗ್‌ನಿಂದ ಕೇಂದ್ರಕ್ಕೆ ಹರಿದು ಬರುತ್ತಿದ್ದ ಆದಾಯ ಹೆಚ್ಚಾಗಿದೆ. ಇತ್ತೀಚೆಗಷ್ಟೇ ಮಾಧ್ಯಮಗಳೊಂದಿಗೆ ಮಾತನಾಡಿದ್ದ ನಿತಿನ್ ಗಡ್ಕರಿ, ಒಂದು ವರ್ಷದೊಳಗೆ ದೇಶದ ಎಲ್ಲಾ ಟೋಲ್ಬೂತ್ ತೆರವುಗೊಳಿಸಿ, ಸಂಪೂರ್ಣ ಜಿಪಿಎಸ್ ಆಧರಿತ ಟೋಲ್ ಸಂಗ್ರಹ ಅನುಷ್ಠಾನಗೊಳಿಸಲಾಗುವುದು ಎಂದು ಹೇಳಿದ್ದರು