ವಿಟ್ಲ: ವ್ಯಕ್ತಿಯೋರ್ವ ಜನನಿಬಿಡ ಸ್ಥಳದಲ್ಲೇ ಮಹಿಳೆಯ ಮೇಲೆ ಮಾರಕಾಸ್ತ್ರದಿಂದ ಹಲ್ಲೆಗೈದು ಕೊಲೆಗೆ ಯತ್ನಿಸಿದ ಘಟನೆ
ಪುಣಚ ಗ್ರಾಮದ ಪರಿಯಾಲ್ತಡ್ಕ ಪೇಟೆಯಲ್ಲಿ ನಡೆದಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ನಾಟೆಕಲ್ಲು ನವಗ್ರಾಮದ ನಿವಾಸಿ ಸೆಂಟ್ರಿಂಗ್ ಶೇಖರ ಯಾನೆ ಶೇಖರ ಪೂಜಾರಿ(50) ಬಂಧಿತ ಆರೋಪಿ.

ಪುಣಚ ಗ್ರಾಮದ ನಾಟೆಕಲ್ಲು ನವಗ್ರಾಮ ನಿವಾಸಿ ಲತಾ ಎಂಬ ಮಹಿಳೆಯ ಮೇಲೆ ಶೇಖರ್ ದಾಳಿ ನಡೆಸಿ ಕೊಲೆಗೆ ಯತ್ನಿಸಿದ್ದು, ಗಂಭೀರ ಗಾಯಗೊಂಡ ಮಹಿಳೆಯನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ 72/2022 ಕಲಂ: 341, 354,506,307 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.