ಮುಂಬೈ: ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ ಮುಖ್ ನೂರು ಕೋಟಿ ಲಂಚ ಸಂಗ್ರಹಣೆಗೆ ಆದೇಶಿದ್ದು ಇದರ ತನಿಖೆಯನ್ನು ಸಿಬಿಐಗೆ ಒಪ್ಪಿಸುವಂತೆ ಸುಪ್ರಿಂ ಮೆಟ್ಟಿಲೇರಿದ್ದ ಮುಂಬೈ ಮಾಜಿ ಪೊಲೀಸ್ ಕಮಿಷನರ್ ಪರಮ್ ಬಿರ್ ಸಿಂಗ್ ಅವರ ಪ್ರಕರಣದ ವಿಚಾರಣೆ ಇಂದು ನಡೆಯಲಿದೆ.
ಫೆಬ್ರವರಿ ಮಧ್ಯಭಾಗದಲ್ಲಿ ಪೊಲೀಸ್ ಅಧಿಕಾರಿ ಸಚಿನ್ ವಾಜೆಯವರನ್ನು ಕರೆದು ಮುಂಬೈಯ ಹೊಟೇಲ್ ಮತ್ತು ಬಾರ್ ಗಳಿಂದ ಹಣ ಸಂಗ್ರಹಿಸುವಂತೆ ಅನಿಲ್ ದೇಶ್ ಮುಖ್ ಅವರು ಹೇಳಿದ್ದರು ಎಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ಬರೆದ ಪತ್ರದಲ್ಲಿ ಈ ಹಿಂದಿನ ಮುಂಬೈ ಪೊಲೀಸ್ ಕಮಿಷನರ್ ಪರಮ್ ಬಿರ್ ಸಿಂಗ್ ಆರೋಪಿಸಿದ್ದರು. ಆದರೆ ಈ ಬಗ್ಗೆ ರಾಜ್ಯಸರ್ಕಾರ ಕ್ರಮ ಕೈಗೊಂಡಿಲ್ಲ , ತನಿಖೆಯನ್ನು ಸಿಬಿಐಗೆ ಒಪ್ಪಿಸಿ ಎಂದು ಪರಮ್ ಬಿರ್ ಸಿಂಗ್ ಸುಪ್ರೀಂ ಕದ ತಟ್ಟಿದರು.