ಮಂಗಳ ಗ್ರಹ ಹಿಂದೆ(ಅಥವಾ ಈಗಲೂ) ಸೂಕ್ಷ್ಮಜೀವಿಗಳ ವಾಸಕ್ಕೆ ಯೋಗ್ಯವಾಗಿತ್ತಾ ಎಂಬುದನ್ನ ಪತ್ತೆಹಚ್ಚಲು ಸಾಕಷ್ಟು ವರ್ಷಗಳಿಂದ ಅಧ್ಯಯನಗಳು ನಡೆಯುತ್ತಿದೆ. ನಾಸಾದ ಮಾರ್ಸ್ ಸೈನ್ಸ್ ಲ್ಯಾಬೊರೇಟರಿ ಮಿಷನ್ನ ಕ್ಯೂರಿಯಾಸಿಟಿ ರೋವರ್ 2012ರ ಆಗಸ್ಟ್ನಲ್ಲಿ ಮಂಗಳ ಗ್ರಹದ ಮೇಲೆ ಲ್ಯಾಂಡ್ ಆಗಿದ್ದು, ಹಲವು ಮಾಹಿತಿಗಳನ್ನ ಭೂಮಿಗೆ ರವಾನಿಸುತ್ತಿದೆ. ಮಂಗಳ ಗ್ರಹದ ಮೇಲೆ ಮೋಡಗಳು ಹಾದುಹೋಗುವ ರೀತಿಯ ಚಿತ್ರಗಳನ್ನ ಕ್ಯೂರಿಯಾಸಿಟಿ ರೋವರ್ ಇತ್ತೀಚೆಗೆ ಕಳಿಸಿದೆ.
ಮಿನಿ ಕೂಪರ್ ಕಾರ್ ಗಾತ್ರದ ಈ ರೋವರ್ನಲ್ಲಿ 17 ಕ್ಯಾಮರಾ ಹಾಗೂ ರೋಬೋಟಿಕ್ ಕೈ ಇದೆ. ಜೊತೆಗೆ ಲ್ಯಾಬ್ಗಳಲ್ಲಿ ಇರುವಂಥ ಉಪಕರಣಗಳನ್ನ ಹೊಂದಿದೆ. 8ಕ್ಕೂ ಹೆಚ್ಚು ವರ್ಷಗಳಿಂದ ಮಂಗಳನ ಅಂಗಳದಲ್ಲಿರುವ ರೋವರ್, ಕೆಂಪು ಗ್ರಹವನ್ನ ಮತ್ತಷ್ಟು ಅರ್ಥ ಮಾಡಿಕೊಳ್ಳಲು ನೆರವಾಗ್ತಿದೆ. ಇತ್ತೀಚೆಗೆ ರೋವರ್ 8 ಸರಣಿ ಚಿತ್ರಗಳನ್ನ ಕಳಿಸಿದೆ. ಭೂಮಿ ಮೇಲೆ ಹೇಗೆ ಮೋಡಗಳು ಚಲಿಸುತ್ತವೋ ಅದೇ ರೀತಿಯ ದೃಶ್ಯ ಮಂಗಳ ಗ್ರಹದಲ್ಲಿ ಸೆರೆಯಾಗಿರೋದನ್ನ ಇದ್ರಲ್ಲಿ ನೋಡಬಹುದು. ನಾರ್ತ್ ಕೆರೊಲಿನಾ ಸ್ಟೇಟ್ ಯೂನಿವರ್ಸಿಟಿಯ ವಿಜ್ಞಾನಿ ಪಾಲ್ ಟ್ವಿಟರ್ನಲ್ಲಿ ಈ ದೃಶ್ಯವನ್ನು ಹಂಚಿಕೊಂಡಿದ್ದಾರೆ.
ಮಾರ್ಚ್ 19ರಂದು ಮಂಗಳನ ಮೇಲೆ 5 ನಿಮಿಷಗಳ ಅಂತದಲ್ಲಿ ಈ 8 ಫೋಟೋಗಳನ್ನ ಸೆರೆಹಿಡಿಯಲಾಗಿದೆ. ಈ ಮೋಡಗಳು ಭೂಮಿಯಲ್ಲಿ ನಾವು ಕಾಣುವಂತದ್ದನ್ನೇ ಹೋಲುತ್ತಿದೆಯಾದ್ರು, ಸಾಕಷ್ಟು ವ್ಯತ್ಯಾಸವನ್ನ ಹೊಂದಿದೆ. ಕೆಂಪು ಗ್ರಹದಲ್ಲಿ ಅತ್ಯಂತ ಭಿನ್ನವಾದ ವಾತಾವರಣವಿದೆ. ಮೋಡಗಳು ರಚನೆಯಾಗಲು, ನೀರಿನ ಮಾಲಿಕ್ಯೂಲ್ಸ್ ಕಣಗಳ ಸುತ್ತ ಸಾಂದ್ರೀಕರಣವಾಗಬೇಕು(ಕಂಡೆನ್ಸ್ ಆಗಬೇಕು). ಆದ್ರೆ ಹೀಗಾಗಲು ಮಂಗಳ ಗ್ರಹ ದಪ್ಪ ವಾತಾವರಣವನ್ನು ಹೊಂದಿಲ್ಲ. ಹೀಗಾಗಿ ಭೂಮಿಯ ರೀತಿ ಮಂಗಳನಲ್ಲಿ ಮೋಡಗಳ ರಚನೆ ಕಷ್ಟ ಎನ್ನಲಾಗಿದೆ.
Clouds in the sky, gently passing overhead.
— Prof. Paul Byrne (@ThePlanetaryGuy) March 20, 2021
On Mars, Friday, March 19, 2021. pic.twitter.com/jJpemPefIV