ವಿಟ್ಲ: ದಯಾ ಕ್ರಿಯೇಷನ್ ಅರ್ಪಿಸುವ “ಸ್ವರ್ಗ ದ ಸಿರಿ” ತುಳು ಭಕ್ತಿಗೀತೆಯ ಪೋಸ್ಟರ್ ಶ್ರೀ ಕ್ಷೇತ್ರ ಕುಕ್ಕಾಜೆಯ ಧರ್ಮದರ್ಶಿ ಶ್ರೀ ಶ್ರೀಕೃಷ್ಣ ಗುರೂಜಿ ರವರ ಶುಭ ಆಶೀರ್ವಾದದಲ್ಲಿ ಬಿಡುಗಡೆಗೊಂಡಿತು.

“ಸ್ವರ್ಗ ಸಿರಿ ” ಎಂಬ ತುಳು ಭಕ್ತಿಗೀತೆಗೆ ಕೆ.ಶಶಿಕಲಾ ಭಾಸ್ಕರ್ ದೈಲಾ ಬಾಕ್ರಬೈಲ್ ಸಾಹಿತ್ಯ ಬರೆದಿದ್ದು, ನಂದಿನಿ ಸುದರ್ಶನ್ ವರ್ಕಾಡಿ ಗಾಯನದಲ್ಲಿ ಮೂಡಿಬರಲಿರುವ ಈ ಹಾಡಿಗೆ ಸಮಗ್ರ ನಿರ್ವಹಣೆ ದಯಾನಂದ ಅಮೀನ್ ಬಾಯಾರು ನಿರ್ವಹಿಸಿದ್ದಾರೆ.


ರವಿ ಎಸ್ ಎಮ್ ಕುಕ್ಕಾಜೆ ಸಹಕಾರ ನೀಡಿದ್ದು. ಪ್ರಚಾರ ಕಲೆ ಮತ್ತು ಸಂಕಲನವನ್ನು ರಿತೇಶ್ ಸೂಪಲಚ್ಚಿಲ್ ರವರು ನಿರ್ವಹಿಸಿದ್ದು, ಈ ತುಳು ಭಕ್ತಿಗೀತೆ ಶೀಘ್ರದಲ್ಲಿ ದಯಾ ಕ್ರಿಯೇಷನ್ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಗೊಳ್ಳಲಿದೆ.