ರಾಮಕುಂಜ: 2021-22ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಈಗಾಗಲೇ ಪ್ರಕಟಗೊಂಡಿದ್ದು, ರಾಮಕುಂಜ ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯ ಜೀವನ್ 625ರಲ್ಲಿ 624 ಅಂಕ ಪಡೆದುಕೊಂಡು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾನೆ.

ಜೀವನ್ ಪ್ರಥಮ ಭಾಷೆ ಸಂಸ್ಕೃತದಲ್ಲಿ 125, ದ್ವಿತೀಯ ಭಾಷೆ ಇಂಗ್ಲಿಷ್‌ನಲ್ಲಿ 100, ತೃತೀಯ ಭಾಷೆ ಕನ್ನಡದಲ್ಲಿ 99, ಗಣಿತ-100, ವಿಜ್ಞಾನ-100, ಸಮಾಜ-100 ಅಂಕ ಪಡೆದುಕೊಂಡಿದ್ದಾರೆ.
ಜೀವನ್ ರಾಮಕುಂಜ ಗ್ರಾಮದ ಸಂಪ್ಯಾಡಿ ನಿವಾಸಿ ಎಸ್.ಹುಕ್ರಪ್ಪ ಗೌಡ ಹಾಗೂ ಮೀನಾಕ್ಷಿ ದಂಪತಿ ಪುತ್ರನಾಗಿದ್ದು, 2021ರಲ್ಲಿ ನಡೆದ ಎನ್‌ಎಂಎಂಎಸ್ ಪರೀಕ್ಷೆಯಲ್ಲಿ ಜೀವನ್ ದ.ಕ.ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದ.