ಬೇಲೂರಿನ ಕುಮಾರ್ ಹಾಗೂ ಶೋಭಾರಾಣಿ ಅವರ ಮಗಳಾದ ಬೇಲೂರಿನ ನಾಟ್ಯ ಶಾಂತಲೆ ಲಾಲಿತ್ಯ ರವರಿಗೆ “ಕರ್ನಾಟಕ ಪ್ರತಿಭಾ ರತ್ನ “ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಲಾಲಿತ್ಯ ರವರು ನಾಟ್ಯ ಕ್ಷೇತ್ರದಲ್ಲಿ ಹಲವಾರು ಪ್ರಶಸ್ತಿ ಹಾಗೂ ಪುರಸ್ಕಾರಗಳನ್ನು ಪಡೆದಿದ್ದಾರೆ.
ಕರ್ನಾಟಕದಾದ್ಯಂತ ಹಲವಾರು ಜಿಲ್ಲೆಗಳಲ್ಲಿ ಹಾಗೂ ಹೊರ ರಾಜ್ಯಗಳಲ್ಲಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಹಲವಾರು ಪ್ರಶಸ್ತಿಗಳನ್ನು ಪಡೆದ ಪ್ರತಿಭೆಗೆ ಅಖಿಲ ಕರ್ನಾಟಕ ಬೆಳದಿಂಗಳು ಸಾಹಿತ್ಯ ಸಮೇಳನ ವತಿಯಿಂದ ಶ್ರೀ ನಾರಾಯಣಿ ದೇವಿ ಹರಿಖಂಡಿಗೆಯಲ್ಲಿ ಪ್ರತಿಷ್ಠಿತ “ಕರ್ನಾಟಕ ಪ್ರತಿಭಾ ರತ್ನ” ಪ್ರಶಸ್ತಿ ನೀಡಿ ಗೌರವಿಸಲಾಯಿತು.