ಪುತ್ತೂರು: ಮೇ 14ರಂದು ರಾತ್ರಿ 11 ಗಂಟೆ ವೇಳೆಗೆ ಬಂಟ್ವಾಳ ತಾಲೂಕು ಕೇಪು ಗ್ರಾಮದ ಕರವೀರ ಬಸ್ ನಿಲ್ದಾಣದ ಬಳಿ ನಡೆದಿದ್ದ ಮಾರಣಾಂತಿಕ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಮತ್ತೆ ಇಬ್ಬರನ್ನು ಬಂಧಿಸಿದ್ದಾರೆ.

ಅಡ್ಯನಡ್ಕ ನಿವಾಸಿ ಗಿರೀಶ್ ಮತ್ತು ಮೈರ ನಿವಾಸಿ ರಕ್ಷಿತ್ ಕುಮಾರ್ ಎಂಬವರಿಗೆ ಮಾರಣಾಂತಿಕ ಹಲ್ಲೆ ಮಾಡಿದ ಘಟನೆಗೆ ಸಂಬಂಧಿಸಿ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಘಟನೆಗೆ ಹಿನ್ನೆಲೆಯಲ್ಲಿ ಈಗಾಗಲೇ ಈರ್ವರನ್ನು ಬಂಧಿಸಲಾಗಿದ್ದು ಇದೀಗ ಅಬ್ದುಲ್ ಸಲಾಂ (23ವ)ಉಕ್ಕುಡ ದರ್ಬೆ ಮನೆ ವಿಟ್ಲ ಕಸಬಾ ಗ್ರಾಮ ಮತ್ತು ಅಯೂಬ್ (24ವ) ಉಕ್ಕುಡ ದರ್ಬೆ ಮನೆ ವಿಟ್ಲ ಕಸಬಾ ಗ್ರಾಮರವರನ್ನು ದಸ್ತಗಿರಿ ಮಾಡಿ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.