ಮಂಗಳೂರು: ದ.ಕ. ಜಿಲ್ಲೆಯಲ್ಲಿ ಮುಂದಿನ ಮೂರು ತಿಂಗಳಿಗೆ ಸಾಕಾಗುವಷ್ಟು ಮರಳು ಸಂಗ್ರಹವಿದೆ. 7 ಸಾವಿರ ರೂಪಾಯಿಗೆ ಮರಳು ಸಿಗಲಿದೆ. ಆದ್ದರಿಂದ ಅಕ್ರಮ ಮರಳುಗಾರಿಕೆಗೆ ಅವಕಾಶ ನೀಡದಿರಿ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹೇಳಿದ್ದಾರೆ.
ಸಿಆರ್ ಝೆಡ್ ವ್ಯಾಪ್ತಿಯಲ್ಲಿ ಮರಳುಗಾರಿಕೆ ನಿಷೇಧದ ಹಿನ್ನೆಲೆಯಲ್ಲಿ ಮರಳಿನ ದರ ಹೆಚ್ಚಿದೆ ಎಂಬ ಮಾತು ಸರಿಯಲ್ಲ. ಶಂಭೂರು ಹಾಗೂ ಮರವೂರಿನ ಡ್ಯಾಂನಲ್ಲಿ ಹೂಳೆತ್ತುವಿಕೆಯ ಮೂಲಕ ತೆರವುಗೊಳಿಸಲಾದ ಮರಳನ್ನು ಸಂಗ್ರಹಿಸಲಾಗುತ್ತದೆ.
ಇದು ಸಿಹಿನೀರಿನ ಮರಳು ಆಗಿರುವ ಕಾರಣ ಉತ್ತಮ ಗುಣಮಟ್ಟದ್ದಾಗಿದೆ. ಆನ್‌ಲೈನ್ ಮೂಲಕ ಮಿತ್ರ ಆ್ಯಪ್‌ನಲ್ಲಿ ಅರ್ಜಿ ಸಲ್ಲಿಸಿ 7,000 ರೂಗೆ ಮರಳು ಸಿಗಲಿದೆ. ಇದಕ್ಕೆ ಜಿಎಸ್‌ಟಿ ಮತ್ತು ಸಾಗಾಟ ವೆಚ್ಚ ಹೆಚ್ಚಾಗಿ ಸೇರಲಿದೆ.
ಅನಧಿಕೃತ ಮರಳುಗಾರಿಕೆಗೆ ಅವಕಾಶ ನೀಡದೇ ಅಧಿಕೃತವಾಗಿ ಮರಳುಗಾರಿಕೆ ಮೂಲಕ ಮರಳು ಖರೀದಿಸಬೇಕು. 200 ಮೆಟ್ರಿಕ್ ಟನ್ ಮರಳು ಸದ್ಯ ಇದೆ. ಆದ್ಯಪಾಡಿಯಲ್ಲಿ 9 ಸಾವಿರ ಯುನಿಟ್, ಶಂಭೂರಿನಲ್ಲಿ 12 ಸಾವಿರ ಮೆಟ್ರಿಕ್ ಟನ್ ಮರಳು ಲಭ್ಯವಿದೆ ಎಂದರು.