ವಿಟ್ಲ: ಅನ್ಯಕೋಮಿನ ವ್ಯಕ್ತಿಯೋರ್ವ ಹಿಂದೂ ಧರ್ಮದ ಬಗ್ಗೆ ಅವಹೇಳನವಾಗಿ ಬರೆದು, ಹಿಂದೂ ಧರ್ಮಿಯರು ಪೂಜಿಸುವ ಶಿವಲಿಂಗವನ್ನು ಅಸಭ್ಯ ರೀತಿಯಲ್ಲಿ ವರ್ಣಿಸಿ ವಾಟ್ಸಾಪ್ ಸ್ಟೇಟಸ್‌ನಲ್ಲಿ ಹಾಕಿದ ಹಿನ್ನೆಲೆ ಹಿಂದೂ ಜಾಗರಣ ವೇದಿಕೆ ವಿಟ್ಲ ತಾಲೂಕು ನ್ಯಾಯಾಲಯಕ್ಕೆ ದೂರು ನೀಡಿದ್ದು, ನ್ಯಾಯಾಲಯದ ಆದೇಶದ ಮೇರೆಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ವಿಟ್ಲ ಕಸಬಾದ ಒಕ್ಕೆತ್ತೂರು ಊರುದಂಗಡಿಯ ನಿವಾಸಿ ರಸೀದ್ ಎಂಬಾತ ಆತನ ವಾಟ್ಸಾಪ್ ಸ್ಟೇಟಸ್‌ನಲ್ಲಿ ಹಿಂದೂ ಧರ್ಮದ ಬಗ್ಗೆ ಅವಹೇಳನವಾಗಿ ಬರೆದು, ಹಿಂದೂ ಧರ್ಮಿಯರು ಪೂಜಿಸುವ ಶಿವಲಿಂಗವನ್ನು ಅಸಭ್ಯ ರೀತಿಯಲ್ಲಿ ವರ್ಣಿಸಿ, ‘ಸಾಬ್ರೆ ಒಳ ಉಡುಪುಗಳನ್ನು ಬಿಗಿಯಾಗಿ, ಸರಿಯಾಗಿ ಧರಿಸಿರಿ ಅಕಸ್ಮಾತ್ ಅವರ ಕಣ್ಣಿಗೆ ಆ ಪವಿತ್ರ ಲಿಂಗ ನಮ್ಮದೇ ಎಂದು ಧಾಂಧಲೆ ಮಾಡಿಯಾರು, ಜಾಗ್ರತೆ…. ಎಂದು ಬರೆದುಕೊಂಡಿದ್ದಾನೆ ಎಂದು ಆರೋಪಿಸಿದ್ದು, ಈ ಬಗ್ಗೆ ಹಿಂದೂ ಜಾಗರಣ ವೇದಿಕೆ ವಿಟ್ಲ ತಾಲೂಕು ನ್ಯಾಯಾಲಯಕ್ಕೆ ದೂರು ನೀಡಿದ್ದು, ನ್ಯಾಯಾಲಯದ ಆದೇಶದ ಮೇರೆಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.