ಸುಳ್ಯ: ಶ್ರೀರಾಂಪೇಟೆಯಲ್ಲಿ ಬೈಕ್ ಮತ್ತು ಕಾರಿನ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ ಬೈಕ್ ಸವಾರ ಮೇನಾಲದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಮೇ.26 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.

ಎರಡು ವಾರಗಳ ಹಿಂದೆ ರಾತ್ರಿ ಶ್ರೀರಾಂಪೇಟೆಯ ಸರಕಾರಿ ಆಸ್ಪತ್ರೆ ಎದುರುಗಡೆ ಮೇನಾಲದ ವಿಷ್ಣುಪ್ರಸಾದ್ ಚಲಾಯಿಸಿಕೊಂಡು ಹೋಗುತ್ತಿದ್ದ ಬೈಕ್ ಮತ್ತು ಬೊಳುಗಲ್ಲಿನ ಯುವಕ ಚಲಾಯಿಸಿಕೊಂಡು ಬರುತ್ತಿದ್ದ ಕಾರು ಮುಖಾಮುಖಿ ಡಿಕ್ಕಿಯಾಗಿತ್ತು.
ಡಿಕ್ಕಿಯ ರಭಸಕ್ಕೆ ವಿಷ್ಣುಪ್ರಸಾದ್ ಮೇನಾಲ ರವರ ಕೈಕಾಲು ತಲೆಗೆ ತೀವ್ರ ಗಾಯಗೊಂಡಿದ್ದು, ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು., ಆದರೇ ಇಂದು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ.