ಕಡಬ: ಕಡಬ ತಾಲೂಕಿನ ಐತೂರು ಗ್ರಾಮದ ಮೂಜೂರು ನಿವಾಸಿ ಪದ್ಮಯ್ಯ ಗೌಡರ ಪತ್ನಿ ಸೀತಮ್ಮ ಎಂಬವರ ಮನೆಗೆ ಮಾ.3ರಂದು ರಾತ್ರಿ ಅರಣ್ಯಾಧಿಕಾರಿಗಳು ಹಾಗೂ ಇತರರು ದಾಳಿಯ ನೆಪದಲ್ಲಿ ಮನೆಗೆ ನುಗ್ಗಿ ದಾಂಧಲೆ ನಡೆಸಿದ ಘಟನೆಗೆ ಸಂಬಂಧಿಸಿ ಕಡಬ ಠಾಣೆಯಲ್ಲಿ 9 ಮಂದಿ ಹಾಗೂ ಇತರ 12 ಮಂದಿಯ ವಿರುದ್ದ ಕಡಬ ಠಾಣೆಯಲ್ಲಿ ಎಪ್.ಐ.ಆರ್ ದಾಖಲಾಗಿದೆ.
ಆರೋಪಿಗಳಾದ ಮಂಗಳೂರು ಸಂಚಾರಿ ದಳದ ವಲಯ ಅರಣ್ಯಾಧಿಕಾರಿ ಸಂಧ್ಯಾ, ಸುಬ್ರಹ್ಮಣ್ಯ ವಲಯಾಣ್ಯಾಧಿಕಾರಿ ರಾಘವೇಂದ್ರ, ಫಾರೆಸ್ಟರ್ ಸಂತೋಷ್, ಪ್ರಕಾಶ್, ಬೀಟ್ ಫಾರೆಸ್ಟರ್ ರವಿಚಂದ್ರ, ಬೀಟ್ ಗಾರ್ಡ್ ಅಶೋಕ್, ಐತ್ತೂರು ಬೀಟ್ ಗಾರ್ಡ್ ಪ್ರಕಾಶ್, ಕಡಬ ಠಾಣೆಯ ಪೊಲೀಸ್ ಸಿಬ್ಬಂದಿ ಶಿವಪ್ರಸಾದ್, ಐತ್ತೂರು ಶಿವಾಜಿನಗರದ ನಿವಾಸಿ ಅಬ್ಬಾಸ್ ಹಾಗೂ ಇತರ ಹನ್ನೆರಡು ಮಂದಿಯ ವಿರುದ್ದ ಐ.ಪಿ.ಸಿ ಕಲಂ 448,383,384,395.323.504,506,34 ಅನ್ವಯ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣದ ಸಾರಾಂಶ: ಅರಣ್ಯಾಧಿಕಾರಿಗಳು ಹಾಗೂ ಇತರರು ದಾಳಿಯ ನೆಪದಲ್ಲಿ ಮನೆಗೆ ನುಗ್ಗಿ ದಾಂಧಲೆ ನಡೆಸಿದ ಬಗ್ಗೆ ಮೂಜೂರು ಪದ್ಮಯ್ಯ ಗೌಡ ಎಂಬವರ ಪತ್ನಿ ಸೀತಮ್ಮ ಎಂಬವರು ಪುತ್ತೂರು ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದರು. ಇದರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಆರು ದಿನದ ಧರಣಿ ಸತ್ಯಾಗ್ರಹ : ಈ ಘಟನೆಗೆ ಸಂಬಂಧಿಸಿದಂತೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲು ನಿರಾಕರಿಸಿದ ಹಿನ್ನಲೆಯಲ್ಲಿ ದೂರುದಾರರು ಕಡಬ ತಹಸೀಲ್ದಾರ್ ಕಛೇರಿಯ ಎದುರು 6 ದಿನಗಳ ಕಾಲ ಧರಣಿ ಸತ್ಯಾಗ್ರಹ ನಡೆಸಿದ್ದರು. ಇವರೊಂದಿಗೆ ನೀತಿ ತಂಡದ ರಾಜ್ಯಾಧ್ಯಕ್ಷ ಜಯನ್.ಟಿ ಪಾಲ್ಗೊಂಡಿದ್ದರು, ಪ್ರತಿಭಟನೆಗೆ ಯಾರು ಜಗ್ಗದಿದ್ದಾಗ ಸೀತಮ್ಮ ಅವರು ಪುತ್ತೂರು ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದರು