ಪುತ್ತೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 8 ವರ್ಷ ಪೂರ್ಣಗೊಳಿಸಿದ ಸಂಭ್ರಮಾಚರಣೆಯ ಹಿನ್ನಲೆಯಲ್ಲಿ ಬಿಜೆಪಿ ಪುತ್ತೂರು ಗ್ರಾಮಾಂತರ ಮತ್ತು ನಗರ ಮಂಡಲದ ವತಿಯಿಂದ ಮೇ.31ರಿಂದ ಜೂ. 14ರ ತನಕ ಸೇವೆ, ಸುಶಾಸನ ಮತ್ತು ಬಡವರ ಕಲ್ಯಾಣ ಘೋಷವಾಕ್ಯದಲ್ಲಿ ಮನೆ ಮನೆ ಅಭಿಯಾನ ನಡೆಸಲಾಗುವುದು ಎಂದು ಬಿಜೆಪಿ ನಗರ ಮಂಡಲ ಅಧ್ಯಕ್ಷ ಪಿ.ಜಿ. ಜಗನ್ನಿವಾಸ್ ರಾವ್ ತಿಳಿಸಿದ್ದಾರೆ.
ಅವರು ಸೋಮವಾರ ಪುತ್ತೂರು ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸರ್ಕಾರದ ಯೋಜನೆಗಳನ್ನು ಜನರ ಮನೆ ಮನೆಗೆ ತಲುಪಿಸುವುದು ಅಭಿಯಾದ ಉದ್ದೇಶವಾಗಿದೆ. ಈ ಸಂದರ್ಭದಲ್ಲಿ 10 ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಗುವುದು.

ಬೂತ್ ಮಟ್ಟದಲ್ಲಿ ಹಾಗೂ ಮಂಡಲ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ಸಂಘಟನೆ ಮಾಡಲಾತ್ತದೆ. ಅಲ್ಲದೆ ವಿವಿಧ ಕ್ಷೇತ್ರಗಳಲ್ಲಿನ ಸಾಧಕರನ್ನು ಗುರುತಿಸುವುದು.
ಲಸಿಕಾ ವಿತರಣೆ ಸಮಪರ್ಕಕವಾಗಿ ಯಶಸ್ವಿಗೊಳಿಸಿವುದು. ಸರ್ಕಾರಿ ಯೋಜನೆಯನ್ನು ಫಲಾನುಭವಿಗಳ ಮನೆಗೆ ತಲುಪಿಸುವುದು ಅಭಿಯಾನದ ಮುಖ್ಯ ಗುರಿಯಾಗಿದೆ. ಇದಕ್ಕಾಗಿ ಪ್ರತಿ ಬೂತ್ ಮಟ್ಟದಲ್ಲಿ ಸಮಿತಿ ರಚನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಬಡವರ ಪಾಲಿಗೆ ವರದಾನವಾಗಿರುವ ಕೇಂದ್ರ ಸರ್ಕಾರದ ಗರೀಬ್ ಕಲ್ಯಾಣ ಅನ್ನ , ಉಜ್ವಲ , ಪಿ.ಎಂ. ಕಿಸಾನ್ ಸಮ್ಮಾನ್, ಅಯುಷ್ಮಾನ್, ಸ್ವಚ್ಚ ಭಾರತ್ ಮಿಷನ್, ಪ್ರಧಾನ ಮಂತ್ರಿ ಆವಾಝ್, ಹರ್ ಘರ್ ನಲ್ , ಪ್ರಧಾನ ಮಂತ್ರಿ ಸೌಭಾಗ್ಯ, ಜನ್‌ಧನ್, ಸುಕನ್ಯಾ, ಅಟಲ್ ಪಿಂಚಣಿ, ಮುದ್ರ, ಮನಸ್ವಿನಿ, ಜಿಎಸ್‌ಟಿ, ನೋಟ್‌ಬ್ಯಾನ್, ೩೦೭ ಕಾಯ್ದೆ ತಿದ್ದುಪಡಿ, ತ್ರಿವಳಿ ತಲಾಖ್, ಸಾಗರ್ ಮಾಲಾ, ಭಾರತ್ ಮಾಲಾ, ಕೋವಿಡ್ ನಿರ್ವಹಣೆ ಯೋಜನೆಗಳು ಸಂಭ್ರಮಾಚರಣೆಯ ಕಾರ್ಯಕ್ರಮಗಳಾಗಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಪುರುಷೋತ್ತಮ ಮುಂಗ್ಲಿಮನೆ, ಜಯಶ್ರೀ ಎಸ್ ಶೆಟ್ಟಿ, ನಗರ ಪ್ರಧಾನ ಕಾರ್ಯದರ್ಶಿ ಯುವರಾಜ್ ಪೆರಿಯತ್ತೋಡಿ, ಮಾದ್ಯಮ ಪ್ರಮುಖರಾದ ರಾಜೇಶ್ ಬನ್ನೂರು, ದಿನೇಶ್ ಜೈನ್, ನಿತೀಶ್ ಕುಮಾರ್ ಶಾಂತಿವನ ಉಪಸ್ಥಿತರಿದ್ದರು.

























